»   » ರಾಜ್‌ ನಿಧನಕ್ಕೆ ಚಿತ್ರೋದ್ಯಮದ ಗಣ್ಯರಿಂದ ಸಂತಾಪ

ರಾಜ್‌ ನಿಧನಕ್ಕೆ ಚಿತ್ರೋದ್ಯಮದ ಗಣ್ಯರಿಂದ ಸಂತಾಪ

Posted By:
Subscribe to Filmibeat Kannada

ಬೆಂಗಳೂರು : ನಟ ಡಾ.ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರವನ್ನು ದರ್ಶಿಸಲು, ಬುಧವಾರ ಸಂಜೆ 6ಗಂಟೆಗೆ ಅವಕಾಶ ಕಲ್ಪಿಸಲಾಗಿದೆ.

ನಗರದ ಅರಮನೆ ಮೈದಾನದಲ್ಲಿ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳು ವೀಕ್ಷಿಸಬಹುದು. ರಾಜ್‌ ಅವರ ಮನೆಯಲ್ಲಿ ಮೌನ ನೆಲೆಸಿದೆ.

ರಾಜ್‌ ನಿಧನಕ್ಕೆ ಗಣ್ಯರ ಸಂತಾಪ :

  • ನಟರಾಗಿ ಮಾತ್ರವಲ್ಲ. ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅವರ ಬಗ್ಗೆ ನನಗೆ ವಿಶ್ವಾಸ. ಅವರ ಅಭಿಮಾನಿಗಳಲ್ಲಿ ನಾನು ಸಹಾ ಒಬ್ಬ. ಮಂಜುನಾಥಸ್ವಾಮಿ ಅವರ ಆತ್ಮಕ್ಕೆ ಶಾಂತಿ ನೀಡಲಿ. -ವೀರೇಂದ್ರ ಹೆಗಡೆ.
  • ದೇವರನ್ನು ಗೆದ್ದ ಮನುಷ್ಯ ರಾಜ್‌ಕುಮಾರ್‌. ಅವರಿಲ್ಲದೆ ನಮಗೆ ದಿಕ್ಕು ತೋಚುತ್ತಿಲ್ಲ. -ದ್ವಾರಕೀಶ್‌.
  • ಯಾರ ಮನಸ್ಸಿಗೂ ನೋವು ನೀಡದ ವ್ಯಕ್ತಿತ್ವ. ಅವರೊಂದು ಕಲಾಶಾಲೆ -ಆರತಿ.
  • ನನಗೆ ದೊಡ್ಡ ಆಘಾತ. ಚಿತ್ರರಂಗದ ಹಿರಿಯ ವ್ಯಕ್ತಿ ಮತ್ತು ಶಕ್ತಿಯನ್ನು ಕಳೆದು ಕೊಂಡಿದ್ದೇವೆ. ಪ್ರೀತಿ ಮಾಡುವ ಹೃದಯ ಕಣ್ಮರೆಯಾಗಿದೆ. -ಉಮಾಶ್ರೀ
  • ನನಗೆ ನಂಬಲಾಗುತ್ತಿಲ್ಲ. ಅವರು ಚಿತ್ರೋದ್ಯಮದ ಆಸ್ತಿ ಮಾತ್ರವಲ್ಲ. ರಾಜ್ಯದ ಆಸ್ತಿ. ನಾವಿಂದು ಅಣ್ಣಾವ್ರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. -ಉಪೇಂದ್ರ
  • ನನಗೆ ಸದ್ಯಕ್ಕೆ ಏನನ್ನು ಹೇಳಲಾಗುತ್ತಿಲ್ಲ. ಅವರೊಂದು ಆಲದ ಮರ. ಅಣ್ಣಾವ್ರು ಹೋದರು. -ಅಂಬರೀಷ್‌.
(ದಟ್ಸ್‌ ಕನ್ನಡ ವಾರ್ತೆ)
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada