»   » ರಾಜ್‌ ಹಾಡುಗಳ ಗುನುಗುತ್ತಾ ಪದಬಂಧ ತುಂಬಿಸಿ!

ರಾಜ್‌ ಹಾಡುಗಳ ಗುನುಗುತ್ತಾ ಪದಬಂಧ ತುಂಬಿಸಿ!

Posted By: Super
Subscribe to Filmibeat Kannada
Dr.Rajkumar
ಇಂದು(ಏ.12) ನಟಸಾರ್ವಭೌಮ ಡಾ. ರಾಜ್‌ರ ಪುಣ್ಯತಿಥಿ. ಈ ಹೊತ್ತು ರಾಜ್‌ ಹಾಡುಗಳನ್ನು ಆಧಾರವಾಗಿಟ್ಟುಕೊಂಡು, ಸಿದ್ಧಪಡಿಸಿದ ಪದಬಂಧ ನಿಮ್ಮಮುಂದಿದೆ. ಇಲ್ಲಿ ಪ್ರಕಟವಾಗಿರುವ ಪದಬಂಧದ ಪ್ರಿಂಟ್‌ ತೆಗೆದು, ಕೈಯಲ್ಲಿಡಿದುಕೊಳ್ಳಿ. ರಾಜ್‌ ಚಿತ್ರಗಳಲ್ಲಿನ ಸುಮಧುರ ಹಾಡುಗಳ ಹಾಡುತ್ತಾ, ಪದಬಂಧ ತುಂಬಿಸಿ. ಆ ಮೂಲಕ ಅಣ್ಣಾವ್ರನ್ನು ನೆನೆಯಿರಿ.


ಎಡದಿಂದ ಬಲಕ್ಕೆ -
(01) ನಗು ನಗುತಾ ನಲೀ ನಲೀ, ಏನೇ ಆಗಲಿ -7
(02) ಜೇನಿನ ಹೊಳೆಯೋ ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ -8
(03) ಇದು ರಾಮ ಮಂದಿರ ಆನಂದ ಸಾಗರ, ಜೊತೆಯಾಗಿ ನೀನಿರಲು ಬಾಳು ಸಹಜದ ಸುಂದರಾ -4
(04) ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೇ ಕನಸು ಕಾಣುವೇ, ನಿಧಾನಿಸು ನಿಧಾನಿಸು -6
(12) ನಾವಿರುವಾ ತಾಣವೆ ಗಂಧದ ಗುಡಿ...-5
(13) ನಿನದೇ ನೆನಪೂ ದಿನವೂ ಮನದಲ್ಲಿ, ನೋಡುವಾ ಆಸೆಯೂ ತುಂಬಿದೇ ನನ್ನಲೀ ನನ್ನಲೀ -6
(15) ಆಕಾಶವೆ ಬೀಳಲಿ ಮೇಲೇ, ನಾ ನಿನ್ನ ಕೈಬಿಡೆನು -6
(16) ನಿನ್ನೀ ನಗುವೇ ಚಂದ್ರೋದಯವೂ ಈ ಮನೆಗೇ, ನಮ್ಮ ಈ ಮನೆಗೇ -4
(18) ನಗುತಾ ನಗುತಾ ಬಾಳೂ ನೀನೂ ನೂರು ವರ್ಷಾ... -5
(19) ವಸಂತ ಕಾಲಾ ಬಂದಾಗಾ, ಮಾವು ಚಿಗುರಲೇ ಬೇಕು -2
(20) ಆ ರತಿಯೇ ಧರೆಗಿಳಿದಂತೆ, ಆ ಮದನಾ ನಗುತಿರುವಂತೆ, ಕಲ್ಲೂ ಮುಳ್ಳೆಲ್ಲ -4
(23) ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಗವ ಹಾಡಿದೆ ಆಲಿಸೆಯಾ?-6
(24) ನಿನ್ನ ಲಗ್ನಪತ್ರಿಕೇ ನನ್ನ ಕೂಗಿ ಕರೆದಿದೇ -2
(25) ನಿನ್ನ ನನ್ನ ಮನವು ಸೇರಿದೆ, ನನ್ನ ನಿನ್ನ ಹೃದಯ ಹಾಡಿದೆ -5
(27) ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗೀ, ಕಣ್ಣೆರೇಕೆ, ಬಿಸಿಯುಸಿರೇಕೆ -3
(31) ಕಾಪಾಡು ಶ್ರೀ ಸತ್ಯನಾರಾಯಣ, ಪನ್ನಗ ಶಯನಾ ಪಾವನ ಚರಣಾ ನಂಬಿದೆ ನಿನ್ನ -7
(33) ನಾದ ಮಯಾ ಈ ಲೋಕವೆಲ್ಲಾ ನಾದಮಯಾ, ಕೊಳಲಿಂದ ಗೋವಿಂದ ಆನಂದ ತುಂಬಿರಲು -5
(34) ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ, ಸದಾ ನಿನ್ನಲಿ ಒಳವಿನಾ ಕವಿತೆ ತುಂಬುವೇ -8
(35) ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ, ಜ್ಞ್ನಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ -4

ಮೇಲಿಂದ ಕೆಳಕ್ಕೆ -
(01) ಬಿಟ್ಟರೆ ಸಿಗದೋನೆ, ಬೆಟ್ಟದಾ ಪುರದೋನೆ, ಬೀರಾ ಓ ಬೀರಾ -7
(05) ಹೃದಯದಲಿ ಇದೇನಿದೂ ನದಿಯೊಂದು ಓಡಿದೆ? (ಕೆಳಗಿಂದ ಮೇಲಕ್ಕೆ) -6
(06) ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೆಬೇಕು ಈ ಮನೆ ಬೆಳಕಾಗಿ -6
(07) ಆಟವೇನೋ ನೋಟವೇನೋ ನನಗೆ ಹೇಳಿದ ಮಾತೇನೂ -5
(08) ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ-8
(09) ಹೇಳಿದ ಮಾತೆ ಕೇಳಿ, ಇದು ಹೇಳಿದ ಮಾತೆ ಕೇಳಿ, ಆದರು ಹೇಳುವೆ ಕೇಳಿ (ಕೆಳಗಿಂದ ಮೇಲಕ್ಕೆ) -5
(10) ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ -4
(11) ಕಾವೇರಿ ಏಕೆ ಓಡುವೇ, ನನ್ನಲ್ಲಿ ಪ್ರೀತಿ ಇಲ್ಲವೇ, ನಿನಗಾಗಿಯೇ ನಾ ಬಳುವೇ -4
(14) ಕಾವೇರಿ ತೀರದಲ್ಲಿ ಒಂದು ಕಾಡು, ಆ ಕಾಡೊಂದು ಮೃಗಗಳ ಬೀಡು -5
(15ಎ) ಏನೇನೋ ಆಸೆ, ನೀ ತಂದಾ ಭಾಷೆ, ಇಂದು ಹೊಸತನ ತಂದು ತನು ಮನ ಕೂಗುತಿದೆ ಬಾ ಎಂದು ನಿನ್ನ-5
(16) ಶ್ರೀಕಂಠಾ ವಿಷಕಂಠಾ, ಲೋಕವನುಳಿಸಲು ವಿಷವನು ಕುಡಿದಾ, ನಂಜುಂಡೇಶ್ವರನೇ -8
(17) ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ -7
(21) ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿ ಅಲ್ಲವೇ? -7
(22) ಕಣ್ಣೀರ ಧಾರೆ ಇದೇಕೆ ಇದೇಕೆ. ನನ್ನೊಲವಿನಾ ಹೂವೆ ಈ ಶೋಕವೇಕೆ?-5
(26) ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ -6
(28) ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು, ಮೆಟ್ಟಿದರೇ ಕಣ್ಣಡ ಮಣ್ಣ ಮೆಟ್ಟ ಬೇಕು -4
(29) ಒಲವೆ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರಾ -4
(30) ಕಣ್ಣು ರೆಪ್ಪೆ ಒಂದನೊಂದು ಮರೆವುದೇ? ಅದು ಎಂದಾದರೂ ಅಗಲಿ ಬೇರೆ ಇರುವುದೇ? -5
(32) ಭಗವಂತ ಕೈಕೊಟ್ಟ ದುಡಿಯೋಕಂತ, ಅದನ್ಯಾಕೆ ಹೊಡೆಯುವೇ ಹೊಡೆಯೋಕಂತಾ -5

English summary
Srinath Bhalle of Richmond has tried his hand in binding Dr.Rajkumars Songs in crossword puzzle.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X