»   » ಅಣ್ಣಾವ್ರ ಸಮಾಧಿ ಬಳಿ ಜನಸಾಗರ; ಬಿಗಿ ಬಂದೋಬಸ್ತು

ಅಣ್ಣಾವ್ರ ಸಮಾಧಿ ಬಳಿ ಜನಸಾಗರ; ಬಿಗಿ ಬಂದೋಬಸ್ತು

Posted By:
Subscribe to Filmibeat Kannada


ಬೆಂಗಳೂರು : ಇಂದು(ಏ.12) ಡಾ.ರಾಜ್‌ ಕುಮಾರ್‌ ಅವರ ಮೊದಲ ಪುಣ್ಯ ತಿಥಿ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಅಂಧರಿಗೆ ಕಣ್ಣು ಕೊಟ್ಟು ರಾಜ್‌ಕುಮಾರ್‌ ಕಣ್ಣಪ್ಪ ಆದ ಸಂಗತಿ ಎಲ್ಲರಿಗೂ ಗೊತ್ತು. ರಾಜ್‌ ಪುಣ್ಯತಿಥಿ ಬೆನ್ನಲ್ಲಿ 501 ಮಂದಿ ರಾಜ್‌ ಅಭಿಮಾನಿಗಳು ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ಶಿವರಾಜ್‌ ಕುಮಾರ್‌ ಅಭಿಮಾನಿಗಳ ಸಂಘ ಏರ್ಪಡಿಸಿರುವ ಸಮಾರಂಭದಲ್ಲಿ 501 ಅಭಿಮಾನಿಗಳು ನೇತ್ರದಾನ ನೀಡುವ ಪ್ರತಿಜ್ಞೆ ಸ್ವೀಕರಿಸಿ, ಸಹಿ ಹಾಕಲಿದ್ದಾರೆ.

ಅಣ್ಣನ ಸ್ಮರಣೆ :

  • ಸಾವಿರಾರು ಜನ ಗುರುವಾರ ಬೆಳಗ್ಗೆಯಿಂದಲೇ ರಾಜ್‌ ಸಮಾಧಿಗೆ ಆಗಮಿಸುತ್ತಿದ್ದಾರೆ.
  • ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿ ಬಳಿಗೆ, ವಿವಿಧ ಅಭಿಮಾನಿ ಸಂಘಗಳು ಮೆರವಣಿಗೆ ಮೂಲಕ ಆಗಮಿಸಿ, ಗೌರವ ಶ್ರದ್ಧಾಂಜಲಿ.
  • ಜಯನಗರ ಕಾಂಪ್ಲೆಕ್ಸ್‌ನಲ್ಲಿ ಬೃಹತ್‌ ಕಾರ್ಯಕ್ರಮ. 10ಸಾವಿರ ಮಜ್ಜಿಗೆ ಪಾಕೆಟ್‌ಗಳ ವಿತರಣೆ.
  • ಸಮಾಧಿ ಬಳಿಗೆ ಆಗಮಿಸುವ ಅಭಿಮಾನಿಗಳು ರಾಜ್‌ ಕುಟುಂಬದಿಂದ ಊಟದ ವ್ಯವಸ್ಥೆ.
  • ಶಾಂತಿ ಸುವ್ಯವಸ್ಥೆ ಕಾಯಲು, ರಾಜ್‌ ಸಮಾಧಿ ಬಳಿ 1000 ಪೊಲೀಸರ ನಿಯೋಜನೆ.
  • ರಾಜ್‌ ಹೆಸರಲ್ಲಿ ಟ್ರಸ್ಟ್‌ ಸ್ಥಾಪನೆಗೆ ರಾಜ್‌ ಕುಟುಂಬದ ನಿರ್ಧಾರ.
(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada