»   » ಗಾಂಧಿನಗರಕ್ಕೆ ಮತ್ತೆ ಬಂದ ಲೀಲಾವತಿ-ವಿನೋದ್‌ರಾಜ್‌

ಗಾಂಧಿನಗರಕ್ಕೆ ಮತ್ತೆ ಬಂದ ಲೀಲಾವತಿ-ವಿನೋದ್‌ರಾಜ್‌

Posted By:
Subscribe to Filmibeat Kannada

ಗಿಡ, ಹಸಿರು ತರಕಾರಿ, ಸೊಪ್ಪು ಎಂದೆಲ್ಲ ಪುರಸೊತ್ತಿಲ್ಲದೆ ಇಷ್ಟು ದಿನ, ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್‌ರಾಜ್‌ ದುಡಿಯುತ್ತಿದ್ದರು. ಈಗ ಗಾಂಧಿನಗರಕ್ಕೆ ಅಮ್ಮ-ಮಗನ ಜೋಡಿ ಮರಳಿ ಬಂದಿದೆ. ಅಲ್ಲೊಂದು ಕಛೇರಿ ಆರಂಭಿಸಿದೆ. ಅಷ್ಟು ಮಾತ್ರವಲ್ಲ ತಮ್ಮ ಬ್ಯಾನರ್‌ನ ಹೊಸ ಚಿತ್ರವನ್ನೂ ಈ ಜೋಡಿ ಘೋಷಿಸಿದೆ.

ಚಿತ್ರದ ಹೆಸರು ‘ಕನ್ನಡ ಕಂದ’. ಹಿಂದೆ ಮಾಡಿದಂತೆಯೇ ತಮ್ಮ ಮಗನ ಹೊಸ ಸಿನಿಮಾಕ್ಕಾಗಿ ಜಮೀನು ಮಾರುತ್ತಿರುವುದಾಗಿ ಲೀಲಾವತಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ನನ್ನ ಮಗ ಡ್ಯಾನ್ಸ್‌ ಚೆನ್ನಾಗಿ ಮಾಡ್ತಾನೆ. ನಟನೆ ಎಲ್ಲಾ ಓಕೆ. ಆದರೆ ಛಾನ್ಸ್‌ ಮಾತ್ರ ಸಿಕ್ತಾ ಇಲ್ಲ ಯಾಕೆ ಅನ್ನೋದು ಅವರ ಪ್ರಶ್ನೆ. ಚಿತ್ರರಂಗದಲ್ಲಿ ನಮ್ಮನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಇದ್ಯಾಕೆ? ನಾವೇನ್‌ ತಪ್ಪು ಮಾಡಿದ್ದೇವೆ ಅನ್ನೋದು ಇನ್ನೊಂದು ಪ್ರಶ್ನೆ.

ನಾನು ಮತ್ತು ವಿನೋದ್‌ರಾಜ್‌ ಬಿಟ್ಟರೆ, ಚಿತ್ರದ ತುಂಬ ಹೊಸ ಮುಖಗಳೇ ತುಂಬಿರುತ್ತವೆ. ನಾಯಕಿ ಮಾಧುರಿಯೂ ಸೇರಿದಂತೆ ಬಹುತೇಕ ಹೊಸಮುಖಗಳಿಗೆ, ಚಿತ್ರದಲ್ಲಿ ಅವಕಾಶ ನೀಡುತ್ತಿದ್ದೇವೆ. ಸಿನಿಮಾ ನಮಗೆ ನಲಿವಿಗಿಂತಲೂ ನೋವನ್ನೇ ಜಾಸ್ತಿ ನೀಡಿದೆ. ಆದರೂ ಬಣ್ಣದ ಹಂಬಲ ನಮ್ಮಿಂದ ದೂರವಾಗಿಲ್ಲ ಎಂದರು ಲೀಲಾವತಿ.

‘ಕನ್ನಡ ಕಂದ’ ಚಿತ್ರದ ಕತೆ ಲೀಲಾವತಿ ಅವರದು. ‘ಗೆಜ್ಜೆನಾದ’ ಸಿನಿಮಾ ನಿರ್ದೇಶಕ ವಿಜಯಕುಮಾರ್‌, ಈ ಚಿತ್ರದ ನಿರ್ದೇಶಕರು. ಹಳೆಯ ಚಿತ್ರಗಳ ಹಾಸ್ಯನಟ ದಿ.ಹನುಮಂತಾಚಾರ್‌ ಅವರ ಪುತ್ರ ಗುರುನಾಥ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada