»   » 45ರ ಶಿವಣ್ಣನ ಮನದಲ್ಲಿ ಇನ್ನಷ್ಟು ಬಣ್ಣದ ಕನಸುಗಳು

45ರ ಶಿವಣ್ಣನ ಮನದಲ್ಲಿ ಇನ್ನಷ್ಟು ಬಣ್ಣದ ಕನಸುಗಳು

Subscribe to Filmibeat Kannada

ಈ ನಾಲ್ಕು ದಶಕಗಳ ಬದುಕಿನಲ್ಲಿ, ಎರಡು ದಶಕಗಳ ಕಲಾ ಬದುಕಿನಲ್ಲಿ ಶಿವಣ್ಣ ಸಾಕಷ್ಟು ಪಳಗಿದ್ದಾರೆ. ಪಕ್ವಗೊಂಡಿದ್ದಾರೆ. ಬೇರೆ ನಟರಿಗೂ ಶಿವಣ್ಣನಿಗೂ ಭಿನ್ನತೆಗಳಿವೆ. ನಿರ್ಮಾಪಕರ ಪಾಲಿಗೆ ಶಿವಣ್ಣ, ಕಾಟ ಕೊಡದ ಸಭ್ಯ ನಟ. ಅಭಿಮಾನಿಗಳ ಪಾಲಿಗೆ ದೌಲತ್ತು ತೋರಿಸದ ಗೆಳೆಯ. ವಿವಾದಗಳಿಗೂ ಶಿವಣ್ಣನಿಗೂ ಮೈಲುದ್ದದ ಅಂತರ. ತನ್ನಪ್ಪ ರಾಜ್‌ರಂತೆಯೇ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುವ ಹಂಬಲ ಅವರಲ್ಲಿದೆ. ಆದರೆ ಅವಕಾಶಗಳೆಲ್ಲಿವೆ?

ಇನ್ನಷ್ಟು ಒಳ್ಳೆ ಚಿತ್ರಗಳಲ್ಲಿ, ಸವಾಲೊಡ್ಡುವ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನನಗಿಷ್ಟ. ಐತಿಹಾಸಿಕ, ಪೌರಾಣಿಕ, ಭಕ್ತಿಭರಿತ ಚಿತ್ರಗಳಿಗೆ ನನ್ನನ್ನು ಕರೆಯಿರಿ ಎಂದು ಶಿವಣ್ಣ, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಆಹ್ವಾನ ನೀಡಿದ್ದಾರೆ. ಅವರೊಳಗಿನ ಕಲಾವಿದ ಹಸಿದಿದ್ದಾನೆ. ಕಲಾಪ್ರೀತಿ, ಚಿಗುರುವ ಕನಸುಗಳು ಶಿವಣ್ಣನನ್ನು ಕಲಾವಿದರಾಗಿ ರೂಪಿಸಿವೆ.

ಆರಂಭದ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗಿ -ಈ ಮೂರು ಚಿತ್ರಗಳು 25ವಾರ ಪ್ರದರ್ಶನಗೊಂಡ ನಂತರ, ಶಿವಣ್ಣ ಹ್ಯಾಟ್ರಿಕ್‌ ಹೀರೋ ಆಗಿಬಿಟ್ಟರು. ಅಪ್ಪನ ನಾಮಬಲದಿಂದಲೇ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರೂ, ತಮ್ಮ ಪ್ರತಿಭೆ ಮತ್ತು ಶ್ರಮದಿಂದ ಅವರು ಬೆಳೆದರು. ಓಂ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೇ, ಎ.ಕೆ.47, ಪ್ರೀತ್ಸೆ ಸೇರಿದಂತೆ 90ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರೂ, ತೃಪ್ತಿದಾಯಕ ಪಾತ್ರ ಸಿಕ್ಕಿಲ್ಲ ಎಂಬ ಕೊರಗು ಅವರಲ್ಲಿದೆ.

ಕಳೆದ ವರ್ಷದ ‘ಜೋಗಿ’ ಚಿತ್ರದ ನಂತರ ಸೋಲಿನ ಸರಪಣಿ ಮುರಿದು, ಶಿವಣ್ಣ ಗೆಲುವಿನ ಹೊಸ್ತಿಲಲ್ಲಿದ್ದಾರೆ. ಸದ್ಯಕ್ಕೆ ‘ಕುಮಾರರಾಮ’ನ ಗುಂಗಿನಲ್ಲಿದ್ದಾರೆ. ಅವರಿಗೆ ನೀವೂ ‘ಹ್ಯಾಪಿ ಬರ್ತ್‌ ಡೇ ’ ಹೇಳ್ರೀ!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada