»   » ಶಿವಣ್ಣನಿಗೆ 46! ಅಭಿಮಾನಿಗಳ ದೃಷ್ಟಿಯಲ್ಲಿ ಅವರಿಗಿನ್ನೂ 23!

ಶಿವಣ್ಣನಿಗೆ 46! ಅಭಿಮಾನಿಗಳ ದೃಷ್ಟಿಯಲ್ಲಿ ಅವರಿಗಿನ್ನೂ 23!

Posted By: Super
Subscribe to Filmibeat Kannada
Hatrick Hero Shivarajkumar
ಬೆಂಗಳೂರು,ಜುಲೈ 12 : ಶಿವರಾಜ್‌ಕುಮಾರ್ ಅವರಿಗೀಗ 46! ನಂಬುವುದು ಕಷ್ಟ. ಆದರೆ ನಿಜ. ಈಗಲೂ ಕಾಲೇಜು ಹುಡುಗನ ಪಾತ್ರಕ್ಕೆ ಅವರು ನ್ಯಾಯಒದಗಿಸಬಲ್ಲರು. ಅವರು ನೂರು ಕಾಲ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನಟ ಶಿವರಾಜ್ ಕುಮಾರ್, ತಮ್ಮ 46ನೇ ಹುಟ್ಟುಹಬ್ಬವನ್ನು ಗುರುವಾರ ಮಧ್ಯಾಹ್ನ ಆಚರಿಸಿದರು.

ಕೇಕ್ ಕತ್ತರಿಸಿದ ಶಿವರಾಜ್, ಅಭಿಮಾನಿಗಳ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾದರು. ಪ್ರೀತಿಗೆ ಶರಣು ಶರಣೆಂದರು. ಒಳ್ಳೆ ಚಿತ್ರಗಳ ಜೊತೆಗೆ, ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

ಗುರುವಾರ ಮಧ್ಯರಾತ್ರಿಯಿಂದಲೇ, ರಾಜ್ಯದ ಮೂಲೆಮೂಲೆಗಳಿಂದ ತಂಡೋಪತಂಡವಾಗಿ ಆಗಮಿಸಿದ್ದ ಅಭಿಮಾನಿಗಳು, ನೆಚ್ಚಿನ ನಟನ ಕಂಡು ಸಂಭ್ರಮಿಸಿದರು. ಸದಾಶಿವನಗರದ ರಾಜ್ ನಿವಾಸದಲ್ಲಿ ಅಭಿಮಾನಿಗಳ ಸಡಗರವೋ ಸಡಗರ.

ಕಾಲಿಲ್ಲದ ಅಂಗವಿಕಲನೊಬ್ಬ, ನೆಚ್ಚಿನ ನಟನನ್ನು ಕಾಣಲು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಅಭಿಮಾನಿ ಸಂಘಗಳು ಅನ್ನಸಂತರ್ಪಣೆ, ರಕ್ತದಾನ ಶಿಬಿರ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

English summary
Hatrick Hero Shivarajkumar celebrated his birthday on Thurdsday(July.12) in Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada