twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕರ ಅಪ್ಪ ಅಮ್ಮನ ಪ್ರೇಮಕ್ಕೆ ಶ್ರದ್ಧಾಂಜಲಿಯೇ ‘ದೇವದಾಸ್‌’

    By Super
    |

    'ದೇವದಾಸ್‌! ಇದು ಕೇವಲ ಸಿನಿಮಾ ಮಾತ್ರವಲ್ಲ ; ಅಪ್ಪ ಅಮ್ಮನ ಪ್ರೇಮಕ್ಕೆ ಶ್ರದ್ಧಾಂಜಲಿ."

    ಐವತ್ತು ಕೋಟಿ ರುಪಾಯಿ ಬಜೆಟ್ಟಿನ, ಬಾಲಿವುಡ್‌ನ ಬಹು ನಿರೀಕ್ಷೆಯ 'ದೇವದಾಸ್‌" ಚಿತ್ರವನ್ನು ಅದರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಬಣ್ಣಿಸುವುದು ಹೀಗೆ. ದೇವದಾಸ್‌ ಕಾದಂಬರಿ ನನ್ನ ಓದಿಗಷ್ಟೇ ಸೀಮಿತವಾಗಿಲ್ಲ . ಆ ಕಾದಂಬರಿಯ ಓದು ನನ್ನನ್ನು ಪರಿಶುದ್ಧನನ್ನಾಗಿಸಿದೆ. ಶಾಂತಿ ತಂದಿದೆ. ಅಲ್ಲಿನ ಘಟನೆಗಳನ್ನು ಮತ್ತೆ ಮತ್ತೆ ಅನುಭವಿಸಿದ್ದೇನೆ ಎಂದು ಬಿಬಿಸಿಯ 'ಫೇಸ್‌ ಟು ಫೇಸ್‌" ಕಾರ್ಯಕ್ರಮದಲ್ಲಿ ಬನ್ಸಾಲಿ ಬಣ್ಣಿಸಿದ್ದಾರೆ.

    ಬನ್ಸಾಲಿ ಹೇಳುವಂತೆ ದೇವದಾಸ್‌ ಸಿನಿಮಾ ಕಾದಂಬರಿಯ ಕಲ್ಪಿತ ಕಥೆ ಮಾತ್ರವಲ್ಲ ; ಅದು ನಿರ್ದೇಶಕನ ಅಪ್ಪ ಅಮ್ಮನ ಪ್ರೇಮದ ಕಥೆಯೂ ಹೌದು. ದೇವದಾಸ್‌ ಅಪ್ಪ ಅಮ್ಮನ ಕಥೆಯಾದ ಬಗೆಯನ್ನು ಅವರು ಹೇಳುವುದು ಹೀಗೆ :

    'ಅಪ್ಪನನ್ನು ಅಮ್ಮ ಗಾಢವಾಗಿ ಅಗಾಧವಾಗಿ ಪ್ರೀತಿಸುತ್ತಿದ್ದಳು. ಪ್ರತಿಯಾಗಿ ಆತ ಯಾವತ್ತೂ ತನ್ನ ಪ್ರೇಮವನ್ನು ತೋಡಿಕೊಂಡಿದ್ದೇ ಇಲ್ಲ . ಆದರೆ, ಸಾಯುವ ಸಮಯದಲ್ಲಿ ಕೋಮಾದಿಂದ ಹೊರಬಂದ ಅಪ್ಪ ಅಮ್ಮನ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡ. ಎರಡೂ ಕೈಗಳು ಬೆಸೆದ ಘಳಿಗೆಯನ್ನು ನಾನು ನೋಡಿದೆ.

    ಅಪ್ಪನ ಪ್ರೇಮ ನನಗೆ ಅರಿವಿಗೆ ಬಂದದ್ದೇ ಆಗ. 25-30 ವರ್ಷಗಳ ಕಾಲ ಆತನೊಂದಿಗೆ ಬದುಕನ್ನು ಹಂಚಿಕೊಂಡಿದ್ದಳು ಅಮ್ಮ . ಅಷ್ಟೂ ವರ್ಷ ಸತತವಾಗಿ ಆತನನ್ನು ಪ್ರೀತಿಸಿದ್ದಳು. ಆದರೆ, ಆತ ಕೊನೆಯ ಘಳಿಗೆಯ ತನಕ ಒಮ್ಮೆಯೂ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರಲಿಲ್ಲ ."

    ದೇವದಾಸ್‌ ಚಿತ್ರದಲ್ಲೂ ಇಂಥದ್ದೇ ದೃಶ್ಯ. ಪಾರೋಳ ಮನೆಯ ಹೊರಗೆ ತನ್ನ ಕೈಗಳನ್ನು ಚಾಚುತ್ತಾ ದೇವದಾಸ್‌ ಸಾಯುತ್ತಾನೆ. ಅಮ್ಮ ಕೂಡ ಸಿನಿಮಾ ನೋಡಿದ್ದಾಳೆ. ಆಕೆಯ ಮನಸ್ಸು ಚಿತ್ರ ನೋಡಿದ ನಂತರ ಕಲಕಿ ಹೋಗಿತ್ತು ಎನ್ನುವ ಬನ್ಸಾಲಿ- ಕಾದಂಬರಿಯನ್ನು ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದಾರಂತೆ. ಕೆಲವು ಘಟನೆಗಳನ್ನು ಸಿನಿಮೀಕರಿಸುವಾಗ ಬದಲಿಸಿದ್ದೇನೆ. ಅದು ಕಾದಂಬರಿಗೆ ನನ್ನ ಪ್ರತಿಕ್ರಿಯೆ. ನಿರ್ದೇಶಕನಾಗಿ ಸ್ವಾತಂತ್ರ್ಯವನ್ನೂ ತೆಗೆದುಕೊಂಡಿದ್ದೇನೆ ಎನ್ನುತ್ತಾ

    ಇಷ್ಟಕ್ಕೂ ದೇವದಾಸ್‌ ಹೇಳುವುದಾದರೂ ಏನು? -
    'ಪ್ರೀತಿ ಎನ್ನುವುದು ಒಮ್ಮೆಯಷ್ಟೇ ಸಂಭವಿಸುವಂಥದ್ದು . ಅದು ಯಾವತ್ತಿಗೂ ಮರುಕಳಿಸುವುದಿಲ್ಲ . ಅಂದರೆ, ಪ್ರೀತಿಯನ್ನು ಒಮ್ಮೆ ಕಳಕೊಂಡರೆ ಅದು ಮತ್ತೆ ಸಿಗುವುದಿಲ್ಲ ."

    ದೇವದಾಸ್‌ ಸಿನಿಮಾ ನಿರ್ಮಿಸುವ ಎರಡೂವರೆ ವರ್ಷಗಳಲ್ಲಿ ಪಡಬಾರದ ಕಷ್ಟ ಪಟ್ಟಿದ್ದೇನೆ. ನನ್ನ ಕಷ್ಟ ದೇವರಿಗಷ್ಟೇ ಗೊತ್ತು ಎನ್ನುವ ಬನ್ಸಾಲಿಗೆ ತಮ್ಮ ಪ್ರಯತ್ನವನ್ನು ಪ್ರೇಕ್ಷಕ ಮಹಾಶಯ ಮೆಚ್ಚುವ ಬಗ್ಗೆ ಅದಮ್ಯ ವಿಶ್ವಾಸ. ಅಂದಹಾಗೆ, ಜು.12 ರ ಶುಕ್ರವಾರ 'ದೇವದಾಸ್‌" ತೆರೆ ಕಂಡಿದೆ.(ಏಜೆನ್ಸೀಸ್‌)

    English summary
    Devdas tribute to my parents love: Sanjay Bhansali
    Wednesday, October 2, 2013, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X