»   » ನವರಸ ನಾಯಕನೊಂದಿಗೆ ಮಾತುಕತೆ

ನವರಸ ನಾಯಕನೊಂದಿಗೆ ಮಾತುಕತೆ

Posted By: Staff
Subscribe to Filmibeat Kannada

'ಮೇಕಪ್‌" ಹೆಸರಿನ ವಿನೂತನ ಚಿತ್ರ ತಯಾರಿಗೆ ಆರಂಭಿಸಿ ಬಹುದಿನಗಳ ನಂತರ ದಿಢೀರ್‌ ಸುದ್ದಿಗೆ ಆಹಾರವಾದವರು ನಟ ಜಗ್ಗೇಶ್‌. ನಿನ್ನೆ ಮೊನ್ನೆಯವರೆಗೂ ಅವರಿವರನ್ನು ಟೀಕಿಸಿ ಸುದ್ದಿಯಾಗುತ್ತಿದ್ದ ಅವರು ಇದೀಗ ತಮ್ಮ ಕುರಿತು ಹೇಳಿಕೊಂಡೇ ಸುದ್ದಿಯಾಗಿದ್ದಾರೆ. ಸದಾ ಪಟಪಟನೆ ಮಾತಾಡಿದರೆ ಮಾತ್ರ ತಕ್ಷಣ ಗುರುತು ಸಿಗುವ ಜಗ್ಗೇಶ್‌ ನಾಲ್ಕು ಪ್ಲಸ್‌ ಒಂದು ಎಂಬಂತೆ ಉತ್ತರಿಸಿದ್ದಾರೆ.

 • 'ಮೇಕಪ್‌" ಚಿತ್ರದಲ್ಲಿ ನೀವು ಏನಾಗಿರ್ತೀರಿ ? ಈ ಚಿತ್ರದ ಕತೆ ನಿಮಗೆ ಇಷ್ಟವಾಯಿತಾ ?
  ಇಷ್ಟು ವರ್ಷದ ಚಿತ್ರದ ಬದುಕಲ್ಲಿ ನಿಜವಾದ ಜಗ್ಗೇಶ್‌ನ ಹೊಂದಿರೋ ಪಾತ್ರಗಳು ಒಂದೂ ಸಿಗಲಿಲ್ಲ. ಆದ್ರೆ ಮೇಕಪ್‌ ಚಿತ್ರ ನಿಜಕ್ಕೂ ನನ್ನೊಳಗಿನ ಕಲಾವಿದನನ್ನ ಹೊರಹಾಕುತ್ತೆ.
 • 'ಮೇಕಪ್‌" ಕತೆಯ ಎಳೆ ಯಾರದು ? ನಿಮಗೆ ಬೆಂಬಲವಾಗಿ ನಿಂತವರು ಯಾರು ?
  ನಂಬಿ. ಕತೆಯ ಎಳೆ ನನ್ನ ಮಗನದು. ನನ್ನ ಈ ವಿನೂತನ ಸಾಹಸಕ್ಕೆ ಆಸರೆಯಾಗಿ ನಿಂತವರು ನಮ್ಮ ಮಾತಾಪಿತರು, ಹೆಂಡತಿ, ಮಕ್ಕಳು.
 • ಈ ಚಿತ್ರದಲ್ಲಿ ಅಂಥಾ ವಿಶೇಷ ಏನಿದೆ ?
  ಆ ಬಗ್ಗೆ ಈಗ ಹೇಳಲ್ಲ. ಚಿತ್ರ ಬಿಡುಗಡೆ ಆದ ಮೇಲೆ ನೀವೇ ಹೇಳ್ತೀರಿ. ನೋಡ್ತಾ ಇರಿ.
 • ಜಗ್ಗೇಶ್‌ ಸಿನಿಮಾ ಅಂದ್ರೆ ವಿಚಿತ್ರ ಡೈಲಾಗ್‌ ಡೆಲಿವರಿ, ವಿಪರೀತದ ಸಂಭಾಷಣೆ ಅನ್ನೋ ನಂಬಿಕೆಯಿದೆ...?
  ಅದು ಹಳೆಯ ಮಾತು, 'ಮೇಕಪ್‌"ನಲ್ಲಿ ನಾವು ಮಾಡ್ತಿರೋ ಪ್ರಯತ್ನವನ್ನು ಕನ್ನಡ ಚಿತ್ರರಂಗದ ಕಳೆದ 60 ವರ್ಷಗಳ ಇತಿಹಾಸದಲ್ಲಿ ಯಾರೂ ಮಾಡಿಲ್ಲ. ಇದರಲ್ಲಿ ಜಗ್ಗೇಶ್‌ ಪಾತ್ರ ಒಂದೇ ಆದ್ರೂ ಗೆಟಪ್‌ಗಳಲ್ಲಿ ಬದಲಾವಣೆ ಇರ್ತದೆ. ಮಾತುಗಳಲ್ಲಿ pun ಇರ್ತದೆ ಸಾಕಲ್ಲವೇ ?(ವಿಜಯ ಕರ್ನಾಟಕ)
English summary
Jaggesh speaks about his new kannada movie Makeup

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada