For Quick Alerts
  ALLOW NOTIFICATIONS  
  For Daily Alerts

  ರಾಜ್‌ಕುಮಾರ್‌ ಮನಸ್ಸಿಗೆ ಆಘಾತ

  By Staff
  |

  ‘ನನಗೆ ಮಂಡಿನೋವು ಇರಬಹುದು. ಆದರೆ ಮನಸ್ಸಿನಲ್ಲಿ ಇನ್ನೂ ಉತ್ಸಾಹ ಹಾಗೇ ಇದೆ. ಚಿತ್ರೋದ್ಯಮದ ಹಿತಕ್ಕಾಗಿ ಎಂಥ ತ್ಯಾಗ ಬಲಿದಾನಕ್ಕೂ ಸಿದ್ಧ’.
  ವರನಟ ಡಾ.ರಾಜ್‌ಕುಮಾರ್‌ ಹೀಗೆ ಹೇಳುವಾಗ ಮಾತಿನಲ್ಲಿ ವಿಷಾದ ಮಡುಗಟ್ಟಿತ್ತು. ಸಿನಿಮಾದ ಸೌಹಾರ್ದ ವಾತಾವರಣದ ಹಸಿರಿನ ದಿನಗಳನ್ನು , ಈ ಹಿಂದೆ ತಾವು ನಡೆಸಿದ ಹೋರಾಟಗಳನ್ನು ಅವರು ಮೆಲುಕು ಹಾಕಲೂ ಕಾರಣವಿತ್ತು. ನಿರ್ಮಾಪಕರು ಮತ್ತು ಪ್ರದರ್ಶಕರ ನಡುವಿನ ಬಗೆಹರಿಯದ ಬಿಕ್ಕಟ್ಟು ಮತ್ತು ಇದೇ ನೆವದಲ್ಲಿ ನಿರ್ಮಾಪಕರ ಸಂಘ ಬಿರುಕು ಬಿಟ್ಟಿರುವುದು ರಾಜ್‌ ಮನಸ್ಸಿಗೆ ಆಘಾತವಾಗಿದೆ.

  ತಮ್ಮ ಕೊನೆಯ ಮಗ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಎರಡನೇ ಚಿತ್ರ ‘ಅಭಿ’ಯ ನೂರು ದಿನದ ಯಶಸ್ವಿ ಓಟವನ್ನು ಬೆಂಗಳೂರಿನಲ್ಲಿ ಮಂಗಳವಾರ (ಆ. 12) ಆಚರಿಸಿದಾಗ ರಾಜ್‌ಕುಮಾರ್‌ ಕಳಕಳಿ ಹೊರಗೆ ಬಿತ್ತು.

  ತಮ್ಮ ಕಾಲದಲ್ಲಿ ಕಡಿಮೆ ಬಜೆಟ್ಟಿನ ಚಿತ್ರಗಳು ಭರ್ಜರಿಯಾಗಿ ಓಡುತ್ತಿದ್ದುದನ್ನು ಸ್ಮರಿಸಿಕೊಂಡ ರಾಜ್‌ಕುಮಾರ್‌, ಇವತ್ತು ಕೋಟಿ ಕೋಟಿ ಸುರಿದರೂ ಮಾರುಕಟ್ಟೆ ಭಣಭಣ ಅನ್ನುತ್ತಿದೆ ಎಂದರು. ದ್ವೇಷ ಅಸೂಯೆಗಳ ಮಡುವಾಗಿರುವ ಸಿನಿಮಾ ಲೋಕದಲ್ಲಿ ಸುಮಧುರ ವಾತಾವರಣವನ್ನು ಟಾರ್ಚು ಹಾಕಿಕೊಂಡು ಹುಡುಕಬೇಕಾಗಿದೆ ಎಂದು ಬೇಜಾರು ತೋಡಿಕೊಂಡರು.

  ಸಿನಿಮಾ ಲೋಕಕ್ಕೆ ಒಳ್ಳೆಯದನ್ನು ಮಾಡಲು ತಾವು ಯಾವುದೇ ರೀತಿಯ ತ್ಯಾಗಕ್ಕೆ ಸಿದ್ಧ ಎಂದು ರಾಜ್‌ ಪದೇಪದೇ ಹೇಳಿದಾಗ ಜೋರು ಚಪ್ಪಾಳೆ. ‘ಅಭಿ’ ಯಶಸ್ಸಿನಲ್ಲಿ ಭಾಗಿಗಳಾಗಲು ಜಯಂತಿ, ರಮೇಶ್‌, ಸಾಹುಕಾರ್‌ ಜಾನಕಿ, ಶ್ರೀನಾಥ್‌, ಕೇಂದ್ರ ವಲಯ ಐಜಿಪಿ ಕೆ. ರವೀಂದ್ರನಾಥ ಠ್ಯಾಗೂರ್‌ ಮುಂತಾದವರು ಸೇರಿದ್ದರು. ಚಿತ್ರದ 211 ಕಲಾವಿದ/ತಂತ್ರಜ್ಞರಿಗೆ ನೆನಪಿನ ಕಾಣಿಕೆ ಸಲ್ಲಿಸಿದ್ದು ಸಮಾರಂಭದ ವಿಶೇಷ.

  (ಇನ್ಫೋ ವಾರ್ತೆ)

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X