»   » ಮದುವೇನಾ, ಥೂ ಇಲ್ಲಪ್ಪಾ - ವಸುಂಧರಾ

ಮದುವೇನಾ, ಥೂ ಇಲ್ಲಪ್ಪಾ - ವಸುಂಧರಾ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಲಂಕೇಶ್‌ ಪತ್ರಿಕೆ’ ನಾಯಕಿ ವಸುಂಧರಾ ದಾಸ್‌ ಮದುವೆಯಾಗುತ್ತಿದ್ದಾರೆ. ಡೇಟಿನ್ನೂ ಫಿಕ್ಸ್‌ ಆಗಿಲ್ಲ. ಹುಡುಗ- ಇಟಲಿಯಲ್ಲಿ ಹುಟ್ಟಿ, ಥೈಲ್ಯಾಂಡ್‌ನಲ್ಲಿ ಬೆಳೆದು, ಬೆಂಗಳೂರಲ್ಲಿ ಓದಿದ ರಾಬರ್ಟೊ ನಾರಾಯಣ್‌. ಈತ ಆರ್ಯ ಆರ್ಕೆಸ್ಟ್ರಾಗೆ ಡ್ರಂ ಬಾರಿಸುತ್ತಾನೆ.

ವಸುಂಧರಾ ಹಾಗೂ ನಾರಾಯಣ್‌ ನಡುವೆ ಬಹುದಿನಗಳಿಂದ ಪ್ರೀತಿ ಪ್ರೇಮ ಪ್ರಣಯ ಇತ್ತು ಅಂತ ಕುಟುಂಬದ ಮೂಲಗಳು ಹೇಳುತ್ತಿವೆ. ಉಭಯ ಕುಟುಂಬಗಳೂ ಮದುವೆಗೆ ಹಸಿರು ನಿಶಾನೆ ತೋರಿಸಿರುವುದರಿಂದ ದಾಸ್‌ಗೆ ಶೀಘ್ರವೇ ಕಂಕಣ ಭಾಗ್ಯ ಅನ್ನೋದು ಸುದ್ದಿ.

ಹೇ ರಾಮ್‌ ಚಿತ್ರದಲ್ಲಿ ಕಮಲಹಾಸನ್‌ ಪರಿಚಯಿಸಿದ ವಸುಂಧರಾಗೆ ನಾಯಕಿ ಆಗೋದಕ್ಕಿಂತ ಗಾಯಕಿಯಾಗಿ ಉಳಿಯುವುದೇ ಮೆಚ್ಚು. ಈಕೆಯ ‘ಶಕಲಕ ಬೇಬಿ’ ಹಾಡು ಜನಪ್ರಿಯ ನಾಯಕಿಯನ್ನಾಗಿಸಿತು. ತಮಿಳು, ಬಂಗಾಳಿ ಚಿತ್ರಗಳಲ್ಲೂ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದವು. ಯಾವುದೇ ಕಾರಣಕ್ಕೂ ಡಯಟ್‌ ಮಾಡೋಲ್ಲ ಎಂಬ ಧೋರಣೆಯ ವಸುಂಧರ ನಿಲುವು ‘ಲಂಕೇಶ್‌ ಪತ್ರಿಕೆ’ಯಲ್ಲಿ ಪರದೆಯ ಅಗಲಕ್ಕೂ ಹರಡಿತ್ತು !

ತನ್ನದೇ ಆದ ಪಾಪ್‌ ಆಲ್ಬಂ ಕೂಡ ಹೊರತಂದಿರುವ ವಸುಂಧರಾ ಸಂಗೀತದ ಹಲವಾರು ಯೋಜನೆಗಳ ಕನಸುಗಳ ಜೊತೆಗೆ ರಾಬರ್ಟೋ ನಾರಾಯಣ್‌ರ ಧ್ಯಾನದಲ್ಲಿದ್ದಾರಾ?ಹಾಗಂತ ವಸುಂಧರಾ ದಾಸ್‌ ಅವರನ್ನು ಕೇಳಿದರೆ, ಮುಖ ಸಿಂಡರಿಸಿಕೊಳ್ಳುತ್ತಾರೆ. ಮದುವೇನೂ ಇಲ್ಲ, ಎಂಥದ್ದೂ ಇಲ್ಲ. ನಾವಿಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಅಷ್ಟೆ ಅಂತಾರೆ. ರಾಬರ್ಟೋ ನಾರಾಯಣ್‌ ಅವರನ್ನು ದಾಸ್‌ ಪ್ರೀತಿಯಿಂದ ಬಾಬ್‌ ಅಂತ ಕರೆಯುತ್ತಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada