»   » ರಾಜ್‌ಕುಮಾರ್‌ ಮತ್ತು ಪಾರ್ವತಮ್ಮನವರು ಕೊಟ್ಟ ಸಲಹೆ

ರಾಜ್‌ಕುಮಾರ್‌ ಮತ್ತು ಪಾರ್ವತಮ್ಮನವರು ಕೊಟ್ಟ ಸಲಹೆ

Posted By: Super
Subscribe to Filmibeat Kannada

ಬೆಂಗಳೂರು ಮೂಲದ ನಾಯಕಿಯರ ಪೈಕಿ ಸದ್ಯಕ್ಕೆ ಹೆಚ್ಚು ವಿಮಾನ ಯಾನ ಮಾಡುತ್ತಿರುವುದು ರಕ್ಷಿತ. ಹೀಗಾಗಿ ಆಕೆಯ ಕೆರಿಯರ್ರು ಸುರಕ್ಷಿತ ಅನ್ನುವುದು ಆಕೆಯ ಕುರಿತು ಹುಟ್ಟಿಕೊಂಡಿರುವ ಹೊಸ ಒನ್‌ಲೈನರ್ರು. ಒಂದೆಡೆ ಅಪ್ಪು ಸೆಂಚುರಿ ಹೊಡೆದ ಖುಷಿ. ಇನ್ನೊಂದೆಡೆ ಅದರ ತೆಲುಗು ರೀಮೇಕ್‌ 'ಈಡಿಯಟ್‌" ಶೂಟಿಂಗ್‌ನಲ್ಲಿ ಬ್ಯುಸಿ. ಈ ಸಂಭ್ರಮದ ಮಧ್ಯೆ 'ಧಮ್‌" ಚಿತ್ರದಲ್ಲಿ ಸುದೀಪ್‌ ಗೈಡೆನ್ಸು. ರಕ್ಷಿತಾಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು.

ತೆಳ್ಳಗಾಗುವ ಪ್ರಯತ್ನದಲ್ಲಿ ರಕ್ಷಿತಾ ಡಯಟ್ಟೇನೂ ಮಾಡುತ್ತಿಲ್ಲ. ಅಣ್ಣಾವ್ರು ಹೇಳಿದರಂತೆ- 'ಚೆನ್ನಾಗಿ ತಿನ್ನಬೇಕು, ಅದಕ್ಕೆ ತಕ್ಕಹಾಗೆ ವ್ಯಾಯಾಮ ಮಾಡಬೇಕು" ಅಂತ. ಅವತ್ತಿಂದ ಇವತ್ತಿನವರೆಗೂ ರಕ್ಷಿತಾ ವ್ಯಾಯಾಮ ಮಾಡ್ತಿರೋದು ಖಂಡಿತ.

ಶೂಟಿಂಗಿನ ಭರಾಟೆ, ವಿಮಾನ ಹಾರಾಟದ ಭರದಲ್ಲಿ ಮೊನ್ನೆ ರಕ್ಷಿತಾಗೆ ಜ್ವರ ಬಂದು, ತೀರಾ ಸೊರಗಿಹೋಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ವಿಜಯ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ನಾಯಕಿಯಾಗೂ ಗೊತ್ತಾಗಿದ್ದಾರೆ. ಈ ಚಿತ್ರ ಸೆಪ್ಟೆಂಬರ್‌ ತಿಂಗಳಲ್ಲಿ ಸೆಟ್ಟೇರ

ಇತ್ತೀಚೆಗೆ ನಡೆದ ಧಮ್‌ ಕೆಸೆಟ್‌ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ರಕ್ಷಿತಾ ಮುಖದಲ್ಲಿ ಜ್ವರದ ಕಳೆ ಹಾಗೇ ಇತ್ತು. ಆದರೆ ಉತ್ಸಾಹಕ್ಕೆ ಕೊರೆಯಿರಲಿಲ್ಲ. ಪೂರಕ ಓದಿಗೆ- 

English summary
Rakshitha is obeying Dr.Rajkumar and Prvathammas suggestion to become slim and healthy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada