»   » ರಾಜಕಾರಣಕ್ಕೆ ತಮಿಳಿನ ಖ್ಯಾತ ನಟ ವಿಜಯಕಾಂತ್‌

ರಾಜಕಾರಣಕ್ಕೆ ತಮಿಳಿನ ಖ್ಯಾತ ನಟ ವಿಜಯಕಾಂತ್‌

Subscribe to Filmibeat Kannada

ಚೆನ್ನೈ : ಜನಪ್ರಿಯ ತಮಿಳು ನಟ ಮತ್ತು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ವಿಜಯಕಾಂತ್‌ ಅವರು ಬುಧವಾರ(ಸೆ.14) ಅಧಿಕೃತವಾಗಿ ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ.

ರಾಜಕೀಯ ರಂಗಕ್ಕೆ ಪ್ರವೇಶ ಬಯಸಿರುವ ವಿಜಯಕಾಂತ್‌, ಮದುರೈನಲ್ಲಿ ನಡೆಯಲಿರುವ ತಮ್ಮ ಅಭಿಮಾನಿಗಳ ಸಂಘದ ಸಮಾವೇಶದಲ್ಲಿ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವರು.

ಕಳೆದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸದ ವಿಜಯಕಾಂತ್‌, ತಮ್ಮ ಅಭಿಮಾನಿ ಸಂಘವನ್ನು ಪ್ರಸ್ತುತ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ. ರಾಜಕಾರಣದಲ್ಲಿ ದಿವಂಗತ ಎಂ.ಜಿ.ರಾಮಚಂದ್ರನ್‌ ಮತ್ತು ಎನ್‌.ಟಿ.ರಾಮರಾವ್‌ ಅವರ ಯಶಸ್ಸು ವಿಜಯಕಾಂತ್‌ ಅವರನ್ನು ಪ್ರೇರೇಪಿಸಿರಬಹುದು ಎನ್ನಲಾಗಿದೆ.

ಯುವ ಜನಾಂಗದ ಮೆಚ್ಚುಗೆ ಪಡೆದಿರುವ ವಿಜಯಕಾಂತ್‌, ಜಿಲ್ಲಾ ಮಟ್ಟದಲ್ಲಿ ತಮ್ಮ ಅಭಿಮಾನಿ ಸಂಘಗಳನ್ನು ಬಲಗೊಳಿಸಲು ನಿರ್ಧರಿಸಿದ್ದಾರೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada