»   » ‘ಸೂರ್ಯ’ನ ಅಪ್ಪುಗೆಯಲ್ಲಿ ಜ್ಯೋತಿಕಾ!

‘ಸೂರ್ಯ’ನ ಅಪ್ಪುಗೆಯಲ್ಲಿ ಜ್ಯೋತಿಕಾ!

Subscribe to Filmibeat Kannada

ಕನ್ನಡದ ‘ನಾಗರಹಾವು’ ಚಿತ್ರದಲ್ಲಿ ನಟ ಉಪೇಂದ್ರ ಜೊತೆ ಬಳುಕುತ್ತ ಅಭಿನಯಿಸಿದ್ದ ನಟಿ ಜ್ಯೋತಿಕಾ, ದಾಂಪತ್ಯ ಪ್ರವೇಶಿಸಿದ್ದಾರೆ. ಎಲ್ಲಾ ಮದುವೆಯಾದ ನಟಿಯರಂತೆ, ಅಭಿನಯಕ್ಕೆ ಜ್ಯೋತಿಕಾ ವಿದಾಯ ಹೇಳುವರೇ ಎಂಬ ಸಂಗತಿ ಇನ್ನೂ ಪ್ರಕಟಗೊಂಡಿಲ್ಲ.

ಚೆನ್ನೈನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ತಮಿಳುನಟ ಸೂರ್ಯ (ನಟ ಶಿವಕುಮಾರ್‌ರ ಪುತ್ರ)ಅವರನ್ನು ಬಾಳಸಂಗಾತಿಯಾಗಿ ಜ್ಯೋತಿಕಾ ಸ್ವೀಕರಿಸಿದರು. ಮುಖ್ಯಮಂತ್ರಿ ಎಂ.ಕರುಣಾನಿಧಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ನಟ ರಜನಿಕಾಂತ್‌, ಕಮಲಹಾಸನ್‌ ಸೇರಿದಂತೆ ಅನೇಕ ಗಣ್ಯರು, ನೂತನ ವಧುವರರಿಗೆ ಶುಭಕೋರಿದರು.

ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಲ್ಲಿರುವ ಸೂರ್ಯ ಮತ್ತು ಜ್ಯೋತಿಕಾ ನಡುವಿನ ಗಾಳಿಸುದ್ದಿಗಳಿಗೆ ಮದುವೆಯಿಂದ ತೆರೆಬಿದ್ದಿದೆ. ಹೊಸ ತಾರಾ ಜೋಡಿಗೆ ಶುಭವಾಗಲಿ. ಅಂದ ಹಾಗೇ ಜ್ಯೋತಿಕಾ, ನಟಿ ನಗ್ಮಾಳ ಸಹೋದರಿ.

ನಗ್ಮಾ ಮದುವೆ ಸುದ್ದಿಯೂ ಎಲ್ಲೆಡೆ ಚಾಲ್ತಿಯಲ್ಲಿದೆ. ಈ ಬಗ್ಗೆ ನಗ್ಮಾ ಮೌನವಹಿಸಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂದು ಭಾವಿಸಿರುವ ಪಡ್ಡೆಗಳು ‘ಅಕ್ಕ ನಿನ್‌ ಗಂಡ ಹೆಂಗಿರಬೇಕು’ ಎಂದು ಮುಂಬೈನಲ್ಲಿ ಕೇಳುತ್ತಿದ್ದಾರಂತೆ!

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada