»   » ಹದಗೆಟ್ಟ ಹೃದಯ: ‘ಭುಜಂಗಯ್ಯ’ಖ್ಯಾತಿಯ ನಟ ಲೋಕೇಶ್‌ ಆಸ್ಪತ್ರೆಗೆ

ಹದಗೆಟ್ಟ ಹೃದಯ: ‘ಭುಜಂಗಯ್ಯ’ಖ್ಯಾತಿಯ ನಟ ಲೋಕೇಶ್‌ ಆಸ್ಪತ್ರೆಗೆ

Posted By: Staff
Subscribe to Filmibeat Kannada

ಬೆಂಗಳೂರು : ಚಿತ್ರನಟ ಹಾಗೂ ರಂಗಭೂಮಿಯ ಹೆಸರಾಂತ ಕಲಾವಿದ ಲೋಕೇಶ್‌ರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಗರದ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಅವರನ್ನು ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ.

ಹೃದಯದ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಲೋಕೇಶ್‌ಗೆ ಎರಡು ತಿಂಗಳ ಹಿಂದೆ ಪೇಸ್‌ ಮೇಕರ್‌ ಅಳವಡಿಸಲಾಗಿತ್ತು. ಆದರೆ ಹೃದಯದ ತೊಂದರೆ ಮರುಕಳಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡ ವಾಕಿ ಚಿತ್ರದ ಮೊದಲ ನಾಯಕ ಎಂ.ವಿ. ಸುಬ್ಬಯ್ಯನಾಯ್ಡ ಪುತ್ರರಾದ ಲೋಕೇಶ್‌, ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆತಿಮ್ಮ, ಬ್ಯಾಂಕರ್‌ ಮಾರ್ಗಯ್ಯ, ಭುಜಂಗಯ್ಯನ ದಶಾವತಾರ ಮತ್ತಿತರ ಚಲನಚಿತ್ರಗಳಲ್ಲಿ ಶ್ರೇಷ್ಠ ಅಭಿನಯ ನೀಡಿದ್ದಾರೆ. ಅನಾರೋಗ್ಯದ ಕಾರಣ ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮದ ಚಟುವಟಿಕೆಗಳಿಂದ ಲೋಕೇಶ್‌ ದೂರ ಉಳಿದಿದ್ದಾರೆ.(ಇನ್ಪೋ ವಾರ್ತೆ)

English summary
'Banker Margaiah' fame Kannada Actor Lokesh's health condition is critical.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada