»   » ಜಾನ್‌ ಅಬ್ರಹಾಂ ಜೊತೆ ‘ಗಂಡ-ಹೆಂಡತಿ’ ಸಂಜನಾ!

ಜಾನ್‌ ಅಬ್ರಹಾಂ ಜೊತೆ ‘ಗಂಡ-ಹೆಂಡತಿ’ ಸಂಜನಾ!

Subscribe to Filmibeat Kannada


ಗೆಳೆಯ ತಿಲಕ್‌ ಜೊತೆ ಸೇರಿ, ‘ಗಂಡ ಹೆಂಡತಿ’ಚಿತ್ರದಲ್ಲಿ ಸಂಜನಾ ಚುಂಬನ ಚಳವಳಿ ನಡೆಸಿದ್ದರು. ಆ ಮೂಲಕ ಈಯಮ್ಮ ಪ್ರೇಕ್ಷಕರ ಮೈ ಬಿಸಿಯೇರಿಸಿದ್ದರು. ಈಗ ದೇಶದ ಟಾಪ್‌ ಮಾಡೆಲ್‌ ಜಾನ್‌ ಅಬ್ರಹಾಂ ಜೊತೆ, ಜಾಹೀರಾತು ಒಂದರಲ್ಲಿ ನಟಿಸಿದ್ದಾರೆ. ಆ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಕೂಲಿಂಗ್‌ ಗ್ಲಾಸ್‌ಗಳ ಜಾಹೀರಾತಿನಲ್ಲಿ ಜಾನ್‌ ಅಬ್ರಹಾಂ ಜೊತೆ ಸಂಜನಾ ನಟಿಸಿದ್ದಾರೆ. ‘ನನ್ನ ವೃತ್ತಿ ಬದುಕಿನಲ್ಲಿ ಇದು ಮೈಲಿಗಲ್ಲು.. ಜಾನ್‌ ಅಬ್ರಹಾಂ ವೃತ್ತಿ ದಕ್ಷತೆ ಹಿರಿದು’ ಎಂದು ತನ್ನ ಅನುಭವಗಳನ್ನು ಸಂಜನಾ ಮೆಲುಕುಹಾಕಿದ್ದಾರೆ. ಆ ಕ್ಷಣಗಳನ್ನು ನೆನೆದು ಪುಳಕಿತರಾಗಿದ್ದಾರೆ!

ಅಂದಹಾಗೇ ರವಿಶ್ರೀವತ್ಸ ನಿರ್ದೇಶನದ ‘ಗಂಡ ಹೆಂಡತಿ’ ಚಿತ್ರ, ತಮ್ಮ ಪಾಲಿಗೆ ಅವಕಾಶಗಳ ಬಾಗಿಲನ್ನೇ ತೆರೆಯುತ್ತದೆ ಎಂದು ಸಂಜನಾ ಕಾದು ಕುಳಿತಿದ್ದರು. ಕನ್ನಡದ ಮಲ್ಲಿಕಾ ಶೆರಾವತ್‌ ಆಗುವ ಕನಸುಕಂಡಿದ್ದರು! ಅವರ ಕನಸುಗಳು ನಿರೀಕ್ಷೆಗಳು ಸುಳ್ಳಾದವು. ಆದರೆ, ಮಾಡೆಲಿಂಗ್‌ ರಂಗದಲ್ಲಿಂದು ಸಕತ್ತು ಬ್ಯುಸಿಯಾಗಿದ್ದಾರೆ. ಎಲ್ಲೋ ಕನ್ನಡನುಡಿಯುವ ಈ ಹುಡುಗಿ ಹೊಟ್ಟೆ ತಣ್ಣಗಿರಲಿ..!!!!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada