»   » ಕುತ್ತೇ..ಕನ್ವರ್ ನಹೀ.. ಕನ್ವರ್ ಲಾಲ್ ಬೋಲೋ..

ಕುತ್ತೇ..ಕನ್ವರ್ ನಹೀ.. ಕನ್ವರ್ ಲಾಲ್ ಬೋಲೋ..

Posted By:
Subscribe to Filmibeat Kannada


ಅಂಬರೀಷ್ ಮತ್ತೆ ಕನ್ವರ್ ಲಾಲ್! ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಅಂತ', ಆಮೇಲೆ ಉಪೇಂದ್ರ ನಿರ್ದೇಶನದ 'ಆಪರೇಷನ್ ಅಂತ'ಚಿತ್ರದಲ್ಲಿ ಅಂಬಿ, ಕನ್ವರ್ ಲಾಲ್ ಆಗಿ ತೆರೆ ಮೇಲೆ ಗರ್ಜಿಸಿದ್ದರು. ಈಗ ಮೂರನೇ ಸಲ ಅವರು ಕನ್ವರ್ ಲಾಲ್ ಆಗಿದ್ದಾರೆ. ಆದರೆ ಇದು ತರ್ಲೆಗಾಗಿ ಮಾತ್ರ! ಅಂದರೆ ರಾಜೇಂದ್ರ ಬಾಬು ನಿರ್ದೇಶನದ ಹೊಸ ಚಿತ್ರ 'ತಿಪ್ಪಾರಹಳ್ಳಿ ತರ್ಲೆಗಳು' ಚಿತ್ರಕ್ಕಾಗಿ ಅಂಬಿ, ಕನ್ವರ್ ಲಾಲ್ ಆಗಿ ಗರ್ಜಿಸಿದ್ದಾರೆ.

ಕುತ್ತೇ.. ಕನ್ವರ್ ನಹೀ.. ಕನ್ವರ್ ಲಾಲ್ ಬೋಲೋ.. ಈ ಟೈಲಾಗ್ ಅಂಬಿ ಅಭಿಮಾನಿಗಳಿಗೆ ಬಲು ಇಷ್ಟ. 25ವರ್ಷಗಳ ನಂತರ ಅಂಬರೀಷ್ ಮತ್ತೆ ಕನ್ವರ್ ಲಾಲ್ ಆಗಿ, ತೆರೆ ಮೇಲೆ ಬಂದಿದ್ದಾರೆ(ಆಪರೇಷನ್ ಅಂತ ಚಿತ್ರದ ಕನ್ವರ್ ಲಾಲ್ ಪಾತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ). ರಾಮನಗರ ಹೊರವಲಯದ ನೂತನ ಕಾರಾಗೃಹದಲ್ಲಿ ಚಿತ್ರೀಕರಣ ನಡೆಯಿತು. ಜೈಲಿನ ಕೈದಿಗಳು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಎಸ್.ನಾರಾಯಣ್, ಓಂ ಪ್ರಕಾಶ್ ರಾವ್, ಕೋಮಲ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಸ್ಯಮಯ ಚಿತ್ರದಲ್ಲಿ ಅಂಬಿ ಪಾತ್ರ ಗಂಭೀರತೆ ನೀಡುತ್ತದೆ, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎನ್ನುತ್ತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

ಚಿತ್ರೀಕರಣದ ಬಿಡುವಿನ ವೇಳೆ ಕೈದಿಗಳ ಜೊತೆ ಅಂಬಿ ಮನಬಿಚ್ಚಿ ಮಾತನಾಡಿದರು. ಕೈದಿಗಳಿಗಾಗಿ ಎರಡು ಟೀವಿ ಸೆಟ್ ಗಳನ್ನು ಕೊಡುಗೆಯಾಗಿ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

(ದಟ್ಸ್ ಕನ್ನಡ ಸಿನಿವಾರ್ತೆ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada