»   » ರೆಬಲ್ ಸ್ಟಾರ್ ಅಂಬರೀಷ್ ದಿಢೀರ್ ಬದಲಾಗಿದ್ದಾರೆ!

ರೆಬಲ್ ಸ್ಟಾರ್ ಅಂಬರೀಷ್ ದಿಢೀರ್ ಬದಲಾಗಿದ್ದಾರೆ!

Subscribe to Filmibeat Kannada

ರೆಬಲ್ ಸ್ಟಾರ್ ಅಂಬರೀಷ್ ಅವರಿಗೂ ಶಿಸ್ತಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಹೇಳಿದ ಸಮಯಕ್ಕೆ ಅವರು ಚಿತ್ರೀಕರಣಕ್ಕೆ ಬಂದದ್ದೇ ಇಲ್ಲ. ಸಭೆ ಸಮಾರಂಭಗಳಿಗೂ ಸಹಾ ಅವರದು ಇದೇ ಪಾಲಿಸಿ. ಆದರೆ ಈ ಮಧ್ಯೆ ಅವರು ಬದಲಾಗಿದ್ದಾರೆ ಎಂದು 'ತಿಪ್ಪಾರಹಳ್ಳಿ ತರ್ಲೆಗಳು' ಚಿತ್ರ ತಂಡದ ಹುಡುಗರು ಹೇಳುತ್ತಿದ್ದಾರೆ.

ಚಿತ್ರೀಕರಣಕ್ಕೆ ಶಿಸ್ತಿನಿಂದ ಸರಿಯಾದ ಸಮಯಕ್ಕೆ ಅಂಬರೀಷ್ ಬರುತ್ತಿರುವುದು ಕಂಡು, ಚಿತ್ರತಂಡಕ್ಕೆ ಅಚ್ಚರಿಯೋ ಅಚ್ಚರಿ. ಯಾವುದೇ ಕಿರಿಕ್ ಇಲ್ಲದೇ ಅವರು ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕನ್ವರ್ ಲಾಲ್ ಪಾತ್ರವನ್ನು ಅಂಬಿ ಈ ಚಿತ್ರದಲ್ಲಿ ಮಾಡುತ್ತಿದ್ದಾರೆ. ಅಂಬಿ ಹೇಳಿದ ಸಮಯಕ್ಕೆ ಯಾಕೆ ಬರೋದಿಲ್ಲ ಅಂದ್ರೆ, ಅವರಿಗೆ ಗೆಳೆಯರು ಅಭಿಮಾನಿಗಳು ಜಾಸ್ತಿ. ಅವರ ಮನೆಯಲ್ಲಿ ಸಿನಿಮಾ ಮತ್ತು ರಾಜಕೀಯದ ಜನ ಯಾವಾಗಲೂ ಇದ್ದೇ ಇರ್ತಾರೆ. ಅವರ ಜೊತೆ ಮಾತಾಡಿ, ಅವರ ಮಾತು ಕೇಳಿ ಮುಂದಿನ ಕೆಲಸಕ್ಕೆ ಹೊರಡುವ ಹೊತ್ತಿಗೆ ಹೇಳಿದ ಸಮಯ ಓಡಿ ಹೋಗಿರುತ್ತದೆ.

ಎಸ್.ವಿ.ರಾಜೇಂದ್ರ ಸಿಂಗ್ ನಿರ್ದೇಶನದ 'ತಿಪ್ಪಾರಹಳ್ಳಿ ತರ್ಲೆಗಳು' ನಂತರ, ಅರ್ಜುನ್ ಸರ್ಜಾ ನಿರ್ಮಾಣದ 'ವಾಯುಪುತ್ರ' ಚಿತ್ರದಲ್ಲಿ ಅವರು ಅಭಿನಯಿಸಲಿದ್ದಾರೆ. ರಾಜಕಾರಣದ ಬದುಕಲ್ಲಿ ಅಂಬಿಯೊಳಗಿನ ಕಲಾವಿದ ಕಳೆದು ಹೋದ ಅನ್ನಿಸುವ ವೇಳೆಗೆ ಅವರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಬಿ ಮಿತ್ರ ವಿಷ್ಣು ನಾಯಕರಾಗಿ ಇನ್ನೂ ಮಿಂಚುತ್ತಿರುವ ಹೊತ್ತಿನಲ್ಲಿ, ಸಣ್ಣಪುಟ್ಟ ಪಾತ್ರಗಳಿಗೆ ಅಂಬಿ ಸೀಮಿತಗೊಳ್ಳುತ್ತಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada