»   » ವಿಶ್ವದೆಲ್ಲೆಡೆ ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬದ ಸಂಭ್ರಮ

ವಿಶ್ವದೆಲ್ಲೆಡೆ ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ 57ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಬೆಂಗಳೂರಿನಲ್ಲಿ ಇಂದು(ಡಿ.12) ಆಚರಿಸಿಕೊಂಡರು. ಆ ಮುಖಾಂತರ ತಮ್ಮ ಬೆಂಗಳೂರು ನಂಟನ್ನು ಬಲಗೊಳಿಸುವ ಪ್ರಯತ್ನ ಅವರದು.

ಚೆನ್ನೈ ರಜನಿ ಅಭಿಮಾನಿಗಳ ಸಂಘ, ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ,ರಜನಿ ಅಭಿನಯದ 8 ಚಲನಚಿತ್ರಗಳ ಪ್ರದರ್ಶನವನ್ನು ಡಿ.12 ಮತ್ತು 13ರಂದು ಏರ್ಪಡಿಸಿದೆ.

ಬಟ್ಟೆ ವಿತರಣೆ, ರಕ್ತದಾನ, ಶೈಕ್ಷಣಿಕ ಸಂಸ್ಥೆಗಳಿಗೆ ನೆರವು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರಜನಿ ಅಭಿಮಾನಿಗಳು ನಡೆಸುತ್ತಿದ್ದಾರೆ. ಕಂಚಿ ಕಾಮಕ್ಷಿ ಅಮ್ಮನ ದೇವಸ್ಥಾನಕ್ಕೆ ಚಿನ್ನದ ಕಿರೀಟ ನೀಡಿದ ಕಂಚಿಪುರಂ ಅಭಿಮಾನಿಗಳು, ತಮ್ಮ ನಾಯಕನಿಗೆ ಅಮ್ಮನ ಆಶೀರ್ವಾದ ಕೋರಿದ್ದಾರೆ.

ಕೊಯಮತ್ತೂರು, ಹೈದರಾಬಾದ್, ಕೋಲ್ಕತ್ತಾ, ನವದೆಹಲಿ, ಚೆನ್ನೈ, ತಿರುವನಂತಪುರ ಸೇರಿದಂತೆ ದೇಶದೆಲ್ಲೆಡೆ ರಜನಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ಅಮೆರಿಕಾ, ದುಬೈ, ಜಪಾನ್ ಮಲೇಷಿಯಾ ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯರು, ರಜನಿ ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ತಮಿಳು ಚಾನೆಲ್ ಗಳಲ್ಲಿ ಇಂದು ರಜನಿಯದೇ ದರ್ಶನ.

ಹೇಗಿದ್ದ ರಜನಿ ಹೇಗೆಲ್ಲಾ ಆದ..

ಮಾರಾಠಿಗನಾದ ರಜನಿ, ಬೆಳೆದದ್ದು ಕರ್ನಾಟಕದಲ್ಲಿ. ನೆಲೆನಿಂತದ್ದು ತಮಿಳುನಾಡಿನಲ್ಲಿ. ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ (ರಜನಿ), ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಯ ಶಿಖರ ತಲುಪಿದ್ದು ಸಾಮಾನ್ಯ ಸಂಗತಿಯಲ್ಲ. ತನ್ನ ಮೈನಸ್ ಪಾಯಿಂಟ್ ಗಳನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡ ರಜನಿ, ಕೋಟ್ಯಂತರ ಜನರ ಹೃದಯ ಕದ್ದ ಚೋರ. ಸ್ಯಾಂಡಲ್ ವುಡ್ ನಲ್ಲಿ ಸೈಕಲ್ ತುಳಿದು, ಚೆನ್ನೈಗೆ ಕಾಲಿಟ್ಟ ರಜನಿ ತಿರುಗಿ ನೋಡಿದ್ದೇ ಇಲ್ಲ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada