»   » ಮೌನಿ, ಸಿಂಗಾರೆವ್ವನಿಗೂ ಗೌರವ

ಮೌನಿ, ಸಿಂಗಾರೆವ್ವನಿಗೂ ಗೌರವ

Posted By:
Subscribe to Filmibeat Kannada
  • ವಿಶಾಖ ಎನ್‌.
ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆಯ ಬಗ್ಗೆ ಅಪಸ್ವರ ಕೇಳಿಬರುತ್ತಿರುವ ಬೆನ್ನಲ್ಲೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರಗಳನ್ನು ಗೌರವಿಸುವುದಾಗಿ ಹೇಳುವ ಮೂಲಕ ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಒಳ್ಳೆ ಸುದ್ದಿ ಕೊಟ್ಟಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ‘ಸಿಂಗಾರೆವ್ವ ಮತ್ತು ಅರಮನೆ’ ಹಾಗೂ ‘ಮೌನಿ’ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಅವಗಣನೆಗೆ ಗುರಿಯಾಗಿರುವುದರ ಬಗ್ಗೆ ಸಿನಿಮಾ ಪತ್ರಕರ್ತರ ಸಂಘ ‘ಬಳಗ’ ಗುರುವಾರ (ಡಿ. 11) ಸಚಿವರ ಗಮನ ಸೆಳೆದಾಗ, ವೀರಭದ್ರಪ್ಪ ಅದಕ್ಕೆ ಸ್ಪಂದಿಸಿದರು.

ಬಳ್ಳಾರಿಯಲ್ಲಿ ಇದೇ ತಿಂಗಳ 27ನೇ ತಾರೀಕು ನಡೆಯಲಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಎರಡೂ ಚಿತ್ರಗಳನ್ನು ಗೌರವಿಸುವುದಾಗಿ ಅಲ್ಲಂ ಹೇಳಿದರು. ಇದೇ ವರ್ಷದಿಂದ ಸಾಧನೆ ಮಾಡಿರುವ ಸಿನಿಮಾ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರಶಸ್ತಿ ಕೊಡುವುದಾಗಿಯೂ ಅವರು ತಿಳಿಸಿದರು.

ಸಿನಿಮಾ ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮಾನ್ಯತೆ ದೊರಕಿಸಿಕೊಡುವ ಬಗ್ಗೆ ಪರಿಶೀಲಿಸುವುದಾಗಿಯೂ ಅಲ್ಲಂ ಭರವಸೆ ಕೊಟ್ಟರು. ರೀಮೇಕ್‌ ಚಿತ್ರಗಳಿಗೆ ಪ್ರಶಸ್ತಿ ಕೊಡುವುದು ಸುತಾರಾಂ ಬೇಡ ಎಂಬ ‘ಬಳಗ’ದ ಆಗ್ರಹಕ್ಕೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ಇದರ ಒಳಿತು- ಕೆಡಕುಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಸದ್ಯದಲ್ಲೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.


ಎಡದಿಂದ ಬಲಕ್ಕೆ : ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ರೈ ( ಉದಯವಾಣಿ), ಸದಾಶಿವ ಶೆಣೈ ( ಲಂಕೇಶ್‌ ಪತ್ರಿಕೆ), ಉದಯಕುಮಾರ್‌ ( ಪ್ರಜಾವಾಣಿ) , ಪ್ರೇಂಕುಮಾರ್‌ ಹರಿಯಬ್ಬೆ ( ಪ್ರಜಾವಾಣಿ) , ಬಳಗದ ಅಧ್ಯಕ್ಷ ಗಿರೀಶ್‌ ರಾವ್‌ (ಜೋಗಿ-ಕನ್ನಡಪ್ರಭ), ಕೆ. ಎಂ.ವೀರೇಶ್‌ ( ಚಿತ್ರಲೋಕ ಡಾಟ್‌ಕಾಂ), ಉದಯ ಮರಕಿಣಿ ( ಕನ್ನಡಪ್ರಭ), ಕೆ. ಎಚ್‌. ಸಾವಿತ್ರಿ ( ಸಂಯುಕ್ತ ಕರ್ನಾಟಕ) ಸಚಿವರನ್ನು ಭೇಟಿ ಮಾಡಿದ ಪತ್ರಕರ್ತರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada