»   » ಪ್ರೀತಿ ಪ್ರೇಮ ಪ್ರಣಯ : ಅಮೆರಿಕನ್ನಡಿಗರ ಕನ್ನಡ ಸಿನಿಮಾ

ಪ್ರೀತಿ ಪ್ರೇಮ ಪ್ರಣಯ : ಅಮೆರಿಕನ್ನಡಿಗರ ಕನ್ನಡ ಸಿನಿಮಾ

By: *ಎಸ್ಕೆ. ಶಾಮಸುಂದರ
Subscribe to Filmibeat Kannada

ಮೂರು ದಿನಗಳ ಹಿಂದಷ್ಟೆ ಸೆಟ್‌ ಏರಿದ 'ಮೌನಿ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅನಂತ್‌ನಾಗ್‌ ಅವರು ಇನ್ನೊಂದು ಕಾಲ್‌ಶೀಟಿಗೆ ಸಹಿ ಹಾಕಿದ್ದಾರೆ. ಇಂಡೋ ಹಾಲಿವುಡ್‌ ಫಿಲ್ಮ್ಸ್‌ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಆ ಚಿತ್ರದ ಹೆಸರು 'ಪ್ರೀತಿ ಪ್ರೇಮ ಪ್ರಣಯ'. ಕಮರ್ಶಿಯಲ್‌ ಮ್ಯೂಸಿಕಲ್‌ ಕಾಮಿಡಿ ಕಥಾ ವಸ್ತು ವಿನ ಈ ಚಿತ್ರ ನಿರ್ಮಿಸುತ್ತಿರುವ ನಾಲ್ಕೂ ಮಂದಿ ವಿದೇಶಿ ಕನ್ನಡಿಗರಾಗಿರುವುದು ಒಂದು ವಿಶೇಷ.

ಮೂಡಲ್‌ ಕುಣಿಗಲ್‌ಗೆರೆ ಖ್ಯಾತಿಯ ರಾಮಪ್ರಸಾದ್‌ ಮತ್ತು ಅವರ ಸೋದರ ಸೋಮಶೇಖರ್‌, ಮನೋಮೂರ್ತಿ (ಎಲ್ಲರೂ ಕ್ಯಾಲಿಫೋರ್ನಿಯ) ಸೇರಿ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕಿ 'ದೇವೀರಿ' ಖ್ಯಾತಿಯ ಕವಿತಾ ಲಂಕೇಶ್‌. ಕಥೆ, ಸಂಭಾಷಣೆ ಕೂಡ ನಿರ್ದೇಶಕಿಯದೇ.

ಪ್ರತಿಯಾಬ್ಬರಿಗೂ ಪ್ರೀತಿ ಬೇಕೇ ಬೇಕು ಎನ್ನುವುದು ಸಂಗಿತ-ಹಾಸ್ಯ ಪ್ರಧಾನವಾಗಿರುವ ಈ ಚಿತ್ರದ ಸಂದೇಶ. ಪ್ರೀತಿ ಬೇಕೇ ಬೇಕು ಎನ್ನುವುದೇನೋ ಸರಿ ಆದರೆ, ಇಂಥ ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಇರಬಾರದು ಕೂಡ ಎನ್ನುವುದೇ ಬೇಕೇಬೇಕು ಪ್ರೀತಿಯ ಸಿನಿಮಾದ ಸಾರ.

ಮುಖ್ಯ ಪಾತ್ರಗಳಲ್ಲಿ ಅನಂತ್‌ನಾಗ್‌, ಕನ್ನಡದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಡಿಂಪಲ್‌ ಕಪಾಡಿಯಾ. ಪ್ರಕಾಶ್‌ ರೈ ಜತೆ ಸುಧಾರಾಣಿ, ರೈ ನಟಿಸುತ್ತಿರುವ ಪಾತ್ರದ ತಮ್ಮನ ಪಾತ್ರಕ್ಕೆ ಕಲಾವಿದ ಇನ್ನೂ ಸಿಕ್ಕಿಲ್ಲ. ಆ ಪಾತ್ರದ ಜತೆಗಾತಿಯಾಗಿ ಭಾವನಾ. ಹಾಸ್ಯ ಪಾತ್ರಗಳ ಮುಖ್ಯ ಭೂಮಿಕೆಯಲ್ಲಿ ಲೋಕನಾಥ್‌ ಮತ್ತು ಶರಪಂಜರ ಶಿವರಾಮ್‌.

'ಪ್ರೀತಿ ಪ್ರೇಮ ಪ್ರಣಯ' ಚಿತ್ರದ ಮುಹೂರ್ತ ಮತ್ತು ಹಾಡುಗಳ ಧ್ವನಿ ಮುದ್ರಣ ಕಾರ್ಯ ಡಿಸೆಂಬರ್‌ 18ರ ಬುಧವಾರ ಬೆಂಗಳೂರಿನಲ್ಲಿ ನೆರವೇರಲಿದೆ ಎಂದು ರಾಮ್‌ಪ್ರಸಾದ್‌ ದಟ್ಸ್‌ಕನ್ನಡ ಡಾಟ್‌ಕಾಂಗೆ ತಿಳಿಸಿದ್ದಾರೆ.

English summary
NRI kannadigas film Venture : Preeti Prema Pranaya. Ramprasad, Somashekher, Mano Murthy and Dr. Renuka ramappa producing kannada movie. Director, Kavita Lankesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada