twitter
    For Quick Alerts
    ALLOW NOTIFICATIONS  
    For Daily Alerts

    2016 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ 126 ಚಿತ್ರಗಳ ಅರ್ಜಿ

    By Suneel
    |

    ದಿನಾಂಕ 01-01-2016 ರಿಂದ 31-12-2016 ಅವಧಿಯಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಪಡೆದ 126 ಚಿತ್ರಗಳ ನಿರ್ಮಾಪಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವುಗಳಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳು ಇವೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, 'ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ'ಗಾಗಿ ಅರ್ಜಿ ಸಲ್ಲಿಸಿರುವ 126 ಚಿತ್ರಗಳ ವಿವರವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ವೆಬ್ ಸೈಟ್ ನಲ್ಲಿ ನೀಡಲಾದ ಚಿತ್ರಗಳ ಲಿಸ್ಟ್ ಹೊರತು ಪಡಿಸಿ ಇತರೆ ನಿರ್ಮಾಪಕರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ವಿಳಾಸ -ಜಂಟಿ ನಿರ್ದೇಶಕರು(ಚಲನಚಿತ್ರ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, #17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ಇವರನ್ನು 05-04-2017 ಸಂಜೆ 5:30 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಸಮೇತ ಸಂಪರ್ಕಿಸಲು ಕೋರಲಾಗಿದೆ.

    126 Films Application for State Annual Cinema Award

    2016 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಚಿತ್ರಗಳ ಪೈಕಿ ಕನ್ನಡ ಸೇರಿದಂತೆ ತುಳು, ಕೊಂಕಣಿ, ಲಂಬಾಣಿ ಪ್ರಾದೇಶಿಕ ಭಾಷೆಯ ಚಿತ್ರಗಳು ಇವೆ. ಅಲ್ಲದೆ ಮಕ್ಕಳ ಚಿತ್ರಗಳು, 2016 ರಲ್ಲಿ ತೆರೆಕಂಡ ಪ್ರಮುಖ ಕಮರ್ಷಿಯಲ್ ಚಿತ್ರಗಳಾದ 'ನಾನು ಮತ್ತು ವರಲಕ್ಷ್ಮಿ', 'ನೀರ್ ದೋಸೆ', 'ಬ್ಯೂಟಿಫುಲ್ ಮನಸ್ಸುಗಳು', 'ರಾಮಾ ರಾಮಾ ರೇ', 'ಕಿರಿಕ್ ಪಾರ್ಟಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಇಷ್ಟಕಾಮ್ಯ', 'ತರ್ಲೆ ವಿಲೇಜ್', 'ಎರಡನೇ ಸಲ', 'ಜಾಗ್ವಾರ್', 'ಸಿನಿಮಾ ಮೈ ಡಾರ್ಲಿಂಗ್', 'ಯೂ-ಟರ್ನ್' ಚಿತ್ರಗಳು ಇವೆ.

    'ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ'ಗೆ ಅರ್ಜಿ ಸಲ್ಲಿಸಿರುವವರು ತಮ್ಮ ಸಿನಿಮಾ ಲಿಸ್ಟ್ ನಲ್ಲಿದೆಯೇ ಎಂಬುದನ್ನು ಪರೀಕ್ಷಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.

    English summary
    126 Films Producers had Applied for State Annual Cinema Award in Department of Information and Public Relation.
    Saturday, April 1, 2017, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X