For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಇಂದಿನಿಂದ ಶುರು

  |

  ಇಂದಿನಿಂದ (ಫೆಬ್ರವರಿ 26) ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಪ್ರಾರಂಭ ಆಗುತ್ತಿದೆ. 12ನೇ ಚಲನಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮ ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಾಳೆಯಿಂದ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

  ನನ್ನ ಸಿನಿ ಪಯಣ ಆರಂಭವಾಗಿದ್ದೇ ಕರ್ನಾಟಕದಿಂದ | Boney Kapoor | Filmibeat Kannada

  ಇಂದಿನ ಕಾರ್ಯಕ್ರಮದಲ್ಲಿ ನಟ ಯಶ್, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಹಾಗೂ ಗಾಯಕ ಸೋನು ನಿಗಮ್ ಭಾಗಿಯಾಗಲಿದ್ದಾರೆ.

  ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘ ಹಾಗೂ ಸುಚಿತ್ರದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಶಂಕರ್ ನಾಗ್ ನಿರ್ದೇಶನದ 'ಮಿಂಚಿನ ಓಟ' ಸಿನಿಮಾ ಜ್ಯೂರಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ತೆಲುಗಿನ 'ಶಂಕರಾಭರಣ' ಹಾಗೂ ರಷ್ಯಾದ 'Ivan's Childhood' ಸಹ ಜ್ಯೂರಿಗಾಗಿ ಆಯೋಜಿಸಿದ ಸಿನಿಮಾಗಳಾಗಿದೆ.

  ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರ್ತಾರೆ ಸೋನು ನಿಗಮ್

  ಮೊದಲ ದಿನ ಪ್ರದರ್ಶನ ಆಗುವ ಕನ್ನಡ ಸಿನಿಮಾಗಳು ಹೀಗಿವೆ

  ಮಿಂಚಿನ ಓಟ (ಒರಾಯನ್ ಮಾಲ್)

  ಒಂದು ಶಿಕಾರಿಯ ಕಥೆ (ನವರಂಗ್)

  ಭಿನ್ನ (ಒರಾಯನ್ ಮಾಲ್)

  ಅಬ್ಯಂಜನ (ಒರಾಯನ್ ಮಾಲ್)

  ನಟ ಸಾರ್ವಭೌಮ (ಒರಾಯನ್ ಮಾಲ್)

  ಕಾಳಿದಾಸ ಕನ್ನಡ ಮೇಷ್ಟ್ರು (ಒರಾಯನ್ ಮಾಲ್)

  ಐ ಲವ್ ಯೂ (ಕಲಾವಿದರ ಸಂಘ)

  ಸುಗಂಧಿ (ನವರಂಗ್)

  ಸವರ್ಣದೀರ್ಘ ಸಂಧಿ (ನವರಂಗ್)

  ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ 3, ಬನಶಂಕರಿಯ ಸುಚಿತ್ರದಲ್ಲಿ 3, ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರಮಂದಿರದಲ್ಲಿ 4 ಸಿನಿಮಾಗಳು ಗುರುವಾರ ಪ್ರದರ್ಶನ ಆಗಲಿದೆ.

  ತಮ್ಮನ್ನು ಚಿಂತನೆಗೊಳಪಡಿಸುವ ಚಿತ್ರಗಳಿಗಾಗಿ ಪ್ರೇಕ್ಷಕರು ಚಲನಚಿತ್ರೋತ್ಸವಕ್ಕೆ ಬರ್ತಾರೆ: ಬಿ.ಎಸ್.ಲಿಂಗದೇವರು

  ಪ್ರಮುಖವಾಗಿ ಚಿತ್ರ ಪ್ರದರ್ಶನ ಒರಾಯನ್ ಮಾಲ್ ನಲ್ಲಿ ನಡೆಯಲಿದೆ. ಮೊದಲ ದಿನ ಇಲ್ಲಿ 45 ಸಿನಿಮಾಗಳು ಪ್ರದರ್ಶನ ಆಗುತ್ತಿದೆ.

  English summary
  12th Bengaluru International Film Festival 1st day movie list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X