ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರ್ತಾರೆ ಸೋನು ನಿಗಮ್
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 26 ರಿಂದ ಈ ಬಾರಿಯ ಚಲನಚಿತ್ರೋತ್ಸವ ನಡೆಯಲಿದೆ. ಸಿನಿಮೋತ್ಸವಕ್ಕೆ ಆಗಮಿಸುವ ಅತಿಥಿಗಳ ಪಟ್ಟಿ ಇದೀಗ ಹೊರಬಂದಿದೆ.
Recommended Video
ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಿನಿಮೋತ್ಸವದ ಬಗ್ಗೆ ಸುದ್ದಿಗೋಷ್ಟಿ ನಡೆಸಿ ವಿವರ ಹಂಚಿಕೊಂಡಿದ್ದಾರೆ. ನಟ ಯಶ್, ಗಾಯಕ ಸೋನು ನಿಗಮ್ ನಿರ್ಮಾಪಕ ಬೋನಿ ಕಪೂರ್ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಭಾಗಿಯಾಗುವ ಪ್ರಮುಖರಾಗಿದ್ದಾರೆ.
ಸೋನು ನಿಗಮ್ ಹಿಂದಿ ಗಾಯಕನಾಗಿದ್ದರೂ, ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಕನ್ನಡಿಗರಿಗೆ ಅವರ ಧ್ವನಿ ತುಂಬ ಹತ್ತಿರವಾಗಿದೆ.

ಕೇಂದ್ರ ಸಚಿವರಾದ ಸದಾನಂದ ಗೌಡ, ನಿರ್ಮಲ ಸೀತಾರಾಮ್ ಕಾರ್ಯಕ್ರಮ ಮುಖ್ಯ ಅತಿಥಿ ಆಗಲಿದ್ದಾರೆ. ಫೆಬ್ರವರಿ 26 ರಂದು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 27 ರಿಂದ ಚಿತ್ರ ಪ್ರದರ್ಶನ ಶುರು ಆಗಲಿದೆ.
ಈ ಬಾರಿ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಆಗಲಿದೆ. ಒರಾಯನ್ ಮಾಲ್, ಸುಚಿತ್ರ, ಕಲಾವಿದರ ಸಂಘ ಹಾಗೂ ನವರಂಗ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ.


Click it and Unblock the Notifications











