12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಪಟ್ಟಿ

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 26 ರಿಂದ ಮಾರ್ಚ್ 4 ನಡೆಯಲಿದೆ. ಮೊದಲ ದಿನ ಉದ್ಘಾಟನೆ ನಡೆಯಲಿದ್ದು, ಫೆಬ್ರವರಿ 27 ರಿಂದ ಚಿತ್ರ ಪ್ರದರ್ಶನ ಪ್ರಾರಂಭ ಆಗಲಿದೆ.

Recommended Video

ನನ್ನ ಸಿನಿ ಪಯಣ ಆರಂಭವಾಗಿದ್ದೇ ಕರ್ನಾಟಕದಿಂದ | Boney Kapoor | Filmibeat Kannada

ಒಟ್ಟು 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಆಗಲಿದೆ. 50 ದೇಶದ ಸಿನಿಮಾಗಳು ಇದರಲ್ಲಿ ಇವೆ. 14 ಸ್ಕ್ರೀನ್ ಗಳಲ್ಲಿ 400ಕ್ಕೂ ಹೆಚ್ಚು ಪ್ರದರ್ಶನ ಆಗಲಿದೆ. ಬೆಂಗಳೂರಿನ ನಾಲ್ಕು ಸ್ಥಳದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ.

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ, ಏಷಿಯನ್ ಸಿನಿಮಾ ಸ್ಪರ್ಧಾ ಹೀಗೆ ವಿವಿಧ ವಿಭಾಗಗಳಲ್ಲಿ ಚಿತ್ರೋತ್ಸವದ ಸ್ಪರ್ಧೆ ನಡೆಯಲಿದೆ. ಕನ್ನಡದ 27 ಸಿನಿಮಾಗಳು, ಕೊಂಕಣಿಯ 1, ತುಳುವಿನ 1 ಸಿನಿಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗಲು ಅವಕಾಶ ಪಡೆದುಕೊಂಡಿದೆ.

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ 14 ಸಿನಿಮಾಗಳು ಪ್ರದರ್ಶನ ಆಗಲಿದೆ. 96, ಅಬ್ಯಂಜನ, ಬೆಲ್ ಬಾಟಂ, ಭಿನ್ನ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಕವಲುದಾರಿ, ಮುಂದಿನ ನಿಲ್ದಾಣ, ಒಂದು ಶಿಕಾರಿಯ ಕಥೆ, ಪಿಂಗಾರ, ರಂಗನಾಯಕಿ, ಸವರ್ಣದೀರ್ಘ ಸಂಧಿ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ರಂಗ ಭೈರವಿ ಹಾಗೂ ಶುಭಮಂಗಳ ಚಿತ್ರಗಳು ಈ ವಿಭಾಗದಲ್ಲಿ ಇವೆ.

ಕನ್ನಡ ಜನಪ್ರಿಯ ಸಿನಿಮಾ ವಿಭಾಗ

ಕನ್ನಡ ಜನಪ್ರಿಯ ಸಿನಿಮಾ ವಿಭಾಗ

ಬೆಲ್ ಬಾಟಂ, ಕಾಳಿದಾಸ ಕನ್ನಡ ಮೇಷ್ಟು, ಅವನೇ ಶ್ರೀಮನ್ನಾರಾಯಣ, ಯಜಮಾನ, ಮುನಿರತ್ನ ಕುರುಕ್ಷೇತ್ರ, ಪೈಲ್ವಾನ್, ಐ ಲವ್ ಯು, ನಟ ಸಾರ್ವಭೌಮ, ಕವಲುದಾರಿ, ಕಿಸ್ ಈ 10 ಸಿನಿಮಾಗಳು ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನ ಆಗುತ್ತಿದೆ.

ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ

ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ

ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ 13 ಸಿನಿಮಾಗಳು ಪ್ರದರ್ಶನ ಆಗುತ್ತಿದೆ. ಈ ಪೈಕಿ ಕನ್ನಡದ ರಂಗನಾಯಕಿ, ಪಿಂಗಾರ (ತುಳು ಹಾಗೂ ಕನ್ನಡ), ಒಂದು ಶಿಕಾರಿಯ ಕಥೆ, ಕಜ್ರೋ ಕೊಂಕಣಿ ಭಾಷೆಯ ಚಿತ್ರಗಳು ಇವೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರ ಅತ್ಯಾಚಾರದ ಕುರಿತಾದ ಸಿನಿಮಾವಾಗಿದೆ.

ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ

ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ

ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು 13 ಚಿತ್ರಗಳು ಪ್ರದರ್ಶನ ಆಗುತ್ತಿವೆ. ಈ ಪೈಕಿ ಕನ್ನಡದ ಒಂದೇ ಸಿನಿಮಾ ಆಯ್ಕೆ ಆಗಿದೆ. ಪ್ರವೀಣ್ ಹಾಗೂ ರಾಧಿಕಾ ಚೇತನ್ ನಟನೆಯ 'ಮುಂದಿನ ನಿಲ್ದಾಣ' ಚಿತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವಿನಯ್ ಭಾರಧ್ವಜ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಭಾರತದ ಮೂರು ಸಿನಿಮಾಗಳು ಈ ವಿಭಾಗಕ್ಕೆ ಆಯ್ಕೆ ಆಗಿದೆ. ಜಲ್ಲಿಕಟ್ಟು ಹಾಗೂ ದಿತೇ ಚಿತ್ರಗಳು ಇವೆ.

ಚಿತ್ರೋತ್ಸವ ನಡೆಯುವ ಸ್ಥಳಗಳು

ಚಿತ್ರೋತ್ಸವ ನಡೆಯುವ ಸ್ಥಳಗಳು

ಈ ಬಾರಿಯ ಚಿತ್ರೋತ್ಸವ ಬೆಂಗಳೂರಿನ 4 ಸ್ಥಳಗಳಲ್ಲಿ ಪ್ರದರ್ಶನ ನಡೆಯಲಿದೆ. ರಾಜಾಜಿನಗರದ ಒರಾಯನ್ ಮಾಲ್, ಚಾಮರಾಜಪೇಟೆಯ ಕಲಾವಿದರ ಸಂಘ, ಬನಶಂಕರಿಯ ಸುಚಿತ್ರ ಹಾಗೂ ಡಾ ರಾಜ್ ಕುಮಾರ್ ರಸ್ತೆಯ ನವರಂಗ್ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಏಳು ದಿನಗಳ ಕಾಲ ಚಿತ್ರ ಪ್ರದರ್ಶನ ಜರುಗಲಿದೆ.

More from Filmibeat

English summary
12th Bengaluru international film festival movies list. Film festival will begin from february 26 to march 4th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X