ಕೋರ್ಟ್ ಕಟಕಟೆಯಲ್ಲಿ ತಮಿಳು ನಟ ಶರತ್ ಬಾಬು

sarath Babu
ನಟ-ನಟಿಯರ ಬದುಕಿನಲ್ಲಿ ಮದುವೆ ನಂತರ ಡೈವೋರ್ಸ್ ಗಳು ಅಪರೂಪವೇನಲ್ಲ. ಕಮಲಹಾಸನ್ ಮೊದಲ್ಗೊಂಡು ಅಮೀರ್ ಖಾನ್, ಅರವಿಂದ ಸ್ವಾಮಿ, ಪ್ರಭುದೇವ, ಪ್ರಕಾಶ್ ರೈ ಹೀಗೆ ಸಾಲು ಸಾಲು ನಟರ ವೈವಾಹಿಕ ಬುದುಕು ಚಿಂದಿ ಚಿತ್ರಾನ್ನವೇ ಆಗಿದೆ. ಕೆಲ ನಟರು ಹೆಂಡತಿ ಬಿಟ್ಟು ಇನ್ನೊಂದು ಮದುವೆಯಾಗಿ ಹಾಯಾಗಿದ್ದಾರೆ. ಈಗ ನಟ ಶರತ್ ಬಾಬು ಸರದಿ.

62 ವಯಸ್ಸಿನ ತಮಿಳು ನಟ ಶರತ್ ಬಾಬು ಅವರ 60 ವಯಸ್ಸಿನ ಪತ್ನಿ ಸ್ನೇಹಲತಾ, ಚೆನ್ನೈನ ಫ್ಯಾಮಿಲಿ ಕೋರ್ಟ್ ನಲ್ಲಿ ಡೈವೋರ್ಸ್ ಗೆ ಅಪ್ಲೈ ಮಾಡಿದ್ದಾರೆ. ಮಾನಸಿಕ ಕಿರುಕುಳದ ಆಧಾರದ ಮೇಲೆ ಕೇಸ್ ದಾಖಲಿಸಿರುವ ಸ್ನೇಹಲತಾ ಜೊತೆ ಆರೋಪಿ ಶರತ್ ಕುಮಾರ್ ಕೂಡ ಕೋರ್ಟಿನಲ್ಲಿ ಹಾಜರಿದ್ದರು. ಡಿಸೆಂಬರ್ 24 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಮೂರು ವರ್ಷದ ಹಿಂದೆ ಅಸ್ತಂಗತರಾದ ಖ್ಯಾತ ನಟ, ದಿವಂಗತ ಎಮ್ ಎನ್ ನಂಬಿಯಾರ್ ಪುತ್ರಿಯಾಗಿದ್ದ ಸ್ನೇಹಲತಾ, ಮೊದಲ ಗಂಡನಿಂದ ಬೇರ್ಪಟ್ಟ ನಂತರ ಶರತ್ ಬಾಬುರನ್ನು ಇಷ್ಟಪಟ್ಟಿದ್ದರು. ಆಗ ಶರತ್ ಬಾಬು ತಮ್ಮ ಪತ್ನಿ ರಮಾ ಪ್ರಭಾಗೆ ವಿಚ್ಛೇದನ ಕೊಟ್ಟು ಈಕೆಯನ್ನು ವರಿಸಿ ಮೇ 28, 1990 ರಂದು ಮದುವೆಯಾಗಿದ್ದರು. ಈ ಸಂಬಂಧ ಹೊಟೆಲ್ ಟ್ರೈಡೆಂಟ್ ನಲ್ಲಿ ಜುಲೈ 2, 1990 ರಂದು ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು.

ಇದೀಗ ವಿಚ್ಛೇದನದ ಜೊತೆ ಶರತ್ ಬಾಬು ಆಸ್ತಿಯಲ್ಲಿ ಪಾಲನ್ನೂ ಕೇಳಿ ಕೇಸ್ ಹಾಕಿದ್ದಾರೆ ಸ್ನೇಹಲತಾ. ಹೆಸರಿಗೆ ವಿರುದ್ಧವಾಗಿ ಸ್ನೇಹವನ್ನೇ ಕಡಿದುಕೊಂಡಿರುವ ಸ್ನೇಹಲತಾ ಜೀವನದ ಮುಂದಿನ ನಡೆ ಸದ್ಯಕ್ಕೆ ನಿಗೂಢ. ಶರತ್ ಬಾಬುಗೆ ಜೇಬು ಖಾಲಿ ಆದ ಮೇಲಾದರೂ ಬುದ್ಧಿ ಬರುತ್ತೋ ಏನೋ ಎನ್ನುತ್ತಿದೆಯಂತೆ ಕಾಲಿವುಡ್. (ಒನ್ ಇಂಡಿಯಾ ಕನ್ನಡ)

More from Filmibeat

English summary
Tamil film actor Sarath Babu, 62 year old made an appearance in the family court on Monday in connection with a divorce case filed by his wife, 60 year old Snehalatha Dixit. She had sought divorce from the actor, on grounds of mental torture. Her petition said Sarath Babu was also present in court .
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X