For Quick Alerts
  ALLOW NOTIFICATIONS  
  For Daily Alerts

  ಅಮೂಲ್ಯ ಸಹೋದರ ದೀಪಕ್ ಅರಸ್ ಮನಸಾಲಜಿ

  By Rajendra
  |

  ಮುಗ್ಧ ಸೌಂದರ್ಯದ ನಟಿ ಅಮೂಲ್ಯ ಅಭಿನಯಿಸುತ್ತಿರುವ ಚಿತ್ರ ಮನಸಾಲಜಿ. ಸಿನಿಸ್ಪರ್ಶ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಉಸ್ತುವಾರಿ ಹೊತ್ತಿರುವ ದೀಪಕ್ ಅರಸ್ ಈ ಚಿತ್ರದ ನಿರ್ಮಾಪಕರು ಹೌದು.

  ದೀಪಕ್ ಅರಸ್ ಅಮೂಲ್ಯರ ಸಹೋದರ. ರಾಕೇಶ್ ಅಡಿಗ 'ಮನಸಾಲಜಿ' ನಾಯಕ. ಅಚ್ಯುತರಾವ್, ಮಂಜುನಾಥರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು. ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣವಿದೆ.

  ಜೋನಿಹರ್ಷ ಸಂಕಲನವಿರುವ 'ಮನಸಾಲಜಿ'ಗೆ ಅಶೋಕ್ ಮದ್ದೂರು ಸಂಭಾಷಣೆ ಬರೆದಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅರಸು ಅಂತಾರೆ ಹಾಗೂ ಅಶೋಕ್ ಮದ್ದೂರು ರಚಿಸಿದ್ದಾರೆ. ಈ ಚಿತ್ರದ ಮೂಲಕ ಅಮೂಲ್ಯ ಸಹೋದರ ದೀಪಕ್ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.

  English summary
  Actress Amoolya brother Deepak Urs maiden maiden film Manasology completed talkie portions. Two songs to be pending for complete. Rakesh Adiga plays the lead role in the film. Anoop Seelan has scored the music and Sugnan is the cameraman.
  Monday, March 14, 2011, 17:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X