»   » ಕನ್ನಡ ಚಿತ್ರಪ್ರೇಮಿಗಳಿಗೆ ವಿಭಿನ್ನ ಚಿತ್ರಗಳ ರಸದೌತಣ

ಕನ್ನಡ ಚಿತ್ರಪ್ರೇಮಿಗಳಿಗೆ ವಿಭಿನ್ನ ಚಿತ್ರಗಳ ರಸದೌತಣ

Subscribe to Filmibeat Kannada

ಬೆಂಗಳೂರು, ಜೂ. 13 : ಕನ್ನಡ ಚಿತ್ರ ಪ್ರೇಮಿಗಳಿಗೆ ಹೊಸ ಚಿತ್ರಗಳ ಸುಗ್ಗಿಯ ಕಾಲ. ಆಕಾಶ ಗಂಗೆ, ದರೋಡೆ ಮತ್ತು ಚನ್ನ ಚಿತ್ರಗಳು ಇಂದು ಬೆಳ್ಳಿ ತೆರೆ ಕಂಡಿವೆ. ವಿಭಿನ್ನ ಕಥಾಹಂದರ ಹೊಂದಿರುವ ಮೂರು ಚಿತ್ರಗಳು ರಾಜ್ಯಾದ್ಯಂತ ಏಕಕಾಲದಲ್ಲಿ ಚಿತ್ರ ಮಂದಿರಕ್ಕೆ ಲಗ್ಗೆಯಿಟ್ಟಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿವೆ.

ದಿನೇಶ್ ಬಾಬು ನಿರ್ದೇಶನದ ಆಕಾಶ ಗಂಗೆ ಚಿತ್ರದಲ್ಲಿ ನಾಯಕ ನಟರಾಗಿ ಮಿಥುನ್ ತೇಜಸ್ವಿ ನಾಯಕಿಯಾಗಿ ಛಾಯಾಸಿಂಗ್ ನಟಿಸಿದ್ದಾರೆ.ಸಾಹಿತ್ಯ ಕೆ.ಕಲ್ಯಾಣ್,ದೇವಾ ಸಂಗೀತ ನಿರ್ದೇಶನ ಮಾಡಿದ್ದಾರೆ. ದಿನೇಶ್ ಬಾಬು ಅವರ ನೈಜ ಜೀವನದಲ್ಲಿ ನಡೆದಿರುವ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ದಿನೇಶ್ ಬಾಬು, ಕೆ.ಕಲ್ಯಾಣ್ ಮತ್ತು ದೇವಾ ತ್ರಿವೇಣಿ ಸಂಗಮದಲ್ಲಿ ಭರ್ಜರಿ ಯಶಸ್ಸು ಗಳಿಸಿದ ಅಮೃತವರ್ಷಿಣಿ ಚಿತ್ರದ ನಂತರ ಇದೀಗ ಮತ್ತೆ ಒಂದಾಗಿದ್ದು, ಮತ್ತೆ ಅಕಾಶ ಗಂಗೆ ಚಿತ್ರದಲ್ಲಿ ಮ್ಯಾಜಿಕ್ ಮಾಡುವುದೇ ಎಂದು ಕಾದು ನೋಡಬೇಕಿದೆ.

ದೀಪಕ್ ಈಗ ಚನ್ನ: ಎಸ್.ಕೆ ಲಾಂಛನದಲ್ಲಿ ಸಂಪತ್ ಕುಮಾರ್ ನಿರ್ಮಿಸಿರುವ ಚನ್ನ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಸ್.ಉಮೇಶ್ ನಿರ್ದೇಶನದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಸಂಪತ್ ಕುಮಾರ್, ಜೆ.ಜೆ.ಕೃಷ್ಣ ಛಾಯಾಗ್ರಹಣ ಮಾಡಿದ್ದಾರೆ. ವೆಂಕಟ್ ನಾರಾಯಣ ಸಂಗೀತ, ಜಂಪರ್ ಕೃಷ್ಣ ಸಾಹಸ ಸಂಯೋಜನೆ ಮಾಡಿದ್ದಾರೆ. ಪರಮೇಶ್, ವಿರುಪಾಕ್ಷ ನೃತ್ಯ ಸಂಯೋಜನೆ, ದೀಪಕ್, ಸತ್ಯಪ್ರಿಯಾ, ಅಭಿನಯಶ್ರೀ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ಖ್ಯಾತ ಖಳ ನಟ ಪೊನ್ನಂಬಲಂ, ಪದ್ಮಾ ವಾಸಂತಿ, ದುನಿಯಾ ಸುನೀಲ್, ರಾಜಬಹದ್ದೂರ್, ಕೋಟಿ ಪ್ರಭಾಕರ್, ರಾಹುಲ್ ಸಂಪತ್ ಮತ್ತಿತರರು ಚಿತ್ರದಲ್ಲಿದ್ದಾರೆ. ಕರವೇ ಅಧ್ಯಕ್ಷ ನಾರಾಯಣಗೌಡರು ಕನ್ನಡದ ಹಿರಿಮೆ ಸಾರುವ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ.

ಜಾದೂಗಾರನ ದರೋಡೆ: ಮಾಯಾ ವಿಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಉದಯ್ ಜಾದೂಗಾರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ, ಛಾಯಾಗ್ರಹಣ ಮಾಡಿ ನಿರ್ದೇಶಿಸಿರುವ ದರೋಡೆ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ವಿಶಿಷ್ಟ ಕಥೆ ಹೊಂದಿರುವ ದರೋಡೆ ಚಿತ್ರ, ಲವ್, ಕಾಮಿಡಿ, ಥ್ರೀಲ್, ರೋಮಾನ್ಸ್ ಹಾಗೂ ಮ್ಯಾಜಿಕ್ ಎಲ್ಲ ಮಸಾಲೆಗಳನ್ನು ಸಮಪ್ರಮಾಣದಲ್ಲಿ ಬೆರಸಲಾಗಿದೆ ಎನ್ನುತ್ತಾರೆ ಉದಯ್ ಜಾದೂಗಾರ್. ವಿನೋದ್ ಕಾಮತ್ ಮತ್ತು ಐಶ್ವರ್ಯ ನಾಗ್ ಮುಖ್ಯಪ್ರಾತ್ರದಲ್ಲಿದ್ದಾರೆ.

(ದಟ್ಸ್ ಕನ್ನಡಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada