For Quick Alerts
  ALLOW NOTIFICATIONS  
  For Daily Alerts

  ಕೋಲ್ಗೆಟ್ ದಂತ ನಗೆ ಬೀರಲಿರುವ ಅನುಷ್ಕಾ ಶೆಟ್ಟಿ

  By Rajendra
  |

  ಕೋಲ್ಗೆಟ್ ಟೂತ್‌ಪೇಸ್ಟ್‌ ಜಾಹೀರಾತಿಗೆ ಹೊಸ ಚೆಲುವೆ ಸಿಕ್ಕಿದ್ದಾರೆ. ಆಕೆ ಬೇರಾರು ಅಲ್ಲ, ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ. ಇದಕ್ಕೂ ಮುನ್ನ ತ್ರಿಷಾ ಕಂಪನಿಯ ರಾಯಭಾರಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ತ್ರಿಷಾ ಕೋಲ್ಗೆಟ್ ನಗೆ ನಕ್ಕು ಸುಸ್ತಾಗಿದ್ದರು.

  ಈಗ ತನ್ನ ಉತ್ಪನ್ನಕ್ಕಾಗಿ ಹೊಸ ಚೆಲುವೆಯನ್ನು ಕೋಲ್ಗೆಟ್ ಆಯ್ಕೆ ಮಾಡಿದೆ. ಇನ್ನು ಮುಂದೆ ಅದೇ ರೀತಿಯ ನಗೆಯನ್ನು ಅನುಷ್ಕಾ ಶೆಟ್ಟಿ ಬೀರಲಿದ್ದಾರೆ. ಅನುಷ್ಕಾ ಅತ್ತ ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚುತ್ತಿರುವುದೇ ಇದಕ್ಕೆ ಕಾರಣ.

  ಯೋಗ ಶಿಕ್ಷಕಿಯಾದ ಅನುಷ್ಕಾ ತಮ್ಮ ದೇಹದ ಸೌಂದರ್ಯವನ್ನು ವರ್ಧಿಸಿಕೊಂಡು ಬಳುಕುವ ಬಳ್ಳಿಯಂತಿದ್ದಾರೆ. ಸಾಲದಕ್ಕೆ ಈ ಬೆಂಗಳೂರು ಬೆಡಗಿ ನಗುವಿನಲ್ಲೂ ಒಂದು ರೀತಿ ಮಾದಕತೆ ಇದೆ. ಇತ್ತೀಚೆಗೆ ಹೊಸ ಕೋಲ್ಗೆಟ್ ಜಾಹೀರಾತನ್ನು ಚಿತ್ರೀಕರಿಸಲಾಗಿದೆ. (ಏಜೆನ್ಸೀಸ್)

  English summary
  Bangalore beauty Anushka Shetty has been roped as the new brand ambassador of Colgate Tooth-Paste. Recently, a new set of Colgate ads was shot on Anushka.
  Wednesday, March 14, 2012, 11:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X