twitter
    For Quick Alerts
    ALLOW NOTIFICATIONS  
    For Daily Alerts

    13 BIFFES: ಸಿನಿಮಾ ಮಾಂತ್ರಿಕನಿಗೆ 'ಶತಮಾನೋತ್ಸವ ಗೌರವ'

    |

    ಬೆಂಗಳೂರಿನ ಹೆಗ್ಗುರುತುಗಳಲ್ಲಿ ಒಂದಾಗಿ ಸೇರ್ಪಡೆಯಾಗಿರುವ 'ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ' ಈ ವರ್ಷ ಮತ್ತೆ ಬಂದಿದೆ. 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವವು ಇದೇ ಮಾರ್ಚ್ 24 ರಿಂದ ಮಾರ್ಚ್ 31 ರ ವರೆಗೆ ನಡೆಯಲಿದೆ.

    ಕೊರೊನಾ ಕಾರಣದಿಂದಾಗಿ ಈ ಬಾರಿಯ ಚಲನಚಿತ್ರೋತ್ಸವ ನಡೆಯುವುದೋ ಇಲ್ಲವೋ ಎಂಬ ಅನುಮಾನ ಸಿನಿಮಾ ಪ್ರೇಕ್ಷಕರಲ್ಲಿ ಮೂಡಿತ್ತು. ಆದರೆ ಕೊರೊನಾ ನಡುವೆಯೂ ಚಲನಚಿತ್ರೋತ್ಸವವನ್ನು ನಡೆಸಲು ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ತೀರ್ಮಾನಿಸಿದೆ.

    ಈ ಬಾರಿಯ ಚಲನಚಿತ್ರೋತ್ಸವದಲ್ಲಿ 'ಶತಮಾನೋತ್ಸವ ಗೌರವ'ವವನ್ನು ಭಾರತೀಯ ಸಿನಿಮಾ ದಿಗ್ಗಜ ಸತ್ಯಜಿತ್ ರೇ ಅವರಿಗೆ ನೀಡಲಾಗಿದೆ. ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ವಿಶ್ವವೇ ಮೆಚ್ಚುವಂತಹಾ ಸಿನಿಮಾಗಳನ್ನು ನಿರ್ದೇಶಿಸಿದ್ದವರು.

    13 Bengaluru International Film Fest: Centenary Tribute To Satyajit Ray

    ಸಮಕಾಲೀನ ವಿಶ್ವ ಸಿನಿಮಾ, ಸಮಕಾಲೀನ ಏಷ್ಯನ್ ಸಿನಿಮಾ, ಕನ್ನಡ ಸಿನಿಮಾ ಸ್ಪರ್ಧೆ, ಜನಪ್ರಿಯ ಕನ್ನಡ ಸಿನಿಮಾ, ಅಂತರಾಷ್ಟ್ರೀಯ ಚಿತ್ರ ವಿಮರ್ಶೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುವ ಸಿನಿಮಾಗಳು, ಜೀವನ ಆಧರಿಸಿದ ಸಿನಿಮಾಗಳು, ಕ್ಲಾಸಿಕ್ ವಿಭಾಗದಲ್ಲಿ ಹಳೆಯ ಸಿನಿಮಾಗಳು, ಕಂಟ್ರಿ ಫೋಕಸ್, ಇನ್ನೂ ಹಲವು ವಿಭಾಗಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

    ಈ ಬಾರಿ ನಾಲ್ಕು ಭಿನ್ನ ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾವನ್ನು 400 ಕ್ಕೂ ಹೆಚ್ಚು ಪ್ರದರ್ಶನ ಮಾಡಲಿದ್ದೇವೆ ಎಂದು ಹೇಳಿದೆ ಅಕಾಡೆಮಿ. ಈ ಬಾರಿಯೂ ಮುಖ್ಯ ಸ್ಥಳ ಒರಾಯಿನ್ ಮಾಲ್ ಆಗಿರುವ ಸಾಧ್ಯತೆ ದಟ್ಟವಾಗಿದೆ.

    Recommended Video

    ಸೆನ್ಸಾರ್ ನಲ್ಲಿ ಗೆದ್ದ ರಾಬರ್ಟ್ | Roberrt gets U/A Certificate | Darshan | Tharun Sudhir

    ಸಿನಿಮಾ ಕರ್ಮಿಗಳು, ತಂತ್ರಜ್ಞರು, ವಿದ್ಯಾರ್ಥಿಗಳು, ಆಸಕ್ತರನ್ನು ಸಿನಿಮೋತ್ಸವಕ್ಕೆ ಸ್ವಾಗತಿಸಿರುವ ಚಲನಚಿತ್ರ ಅಕಾಡೆಮಿ, ಕೋವಿಡ್ ನಡುವೆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಈ ಬಾರಿ ಚಲನಚಿತ್ರೋತ್ಸವವನ್ನು ಆಚರಿಸುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.

    12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವವು ಫೆಬ್ರವರಿ 26 ರಿಂದ ಮಾರ್ಚ್ 4 ರವರೆಗೆ ನಡೆದಿತ್ತು. ಸಾವಿರಾರು ಮಂದಿ ಒರಾಯನ್ ಮಾಲ್‌ನಲ್ಲಿ ಹಲವು ದೇಶಗಳ, ಹಲವು ಭಾಷೆಗಳ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು.

    English summary
    13th Bengaluru International Film Fest giving centenary tribute to ace director Satyajit Ray.
    Wednesday, March 3, 2021, 20:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X