»   » ಸಿನೆಮಾ ಮತ್ತು ಸರ್ಕಾರದ ಜಟಾಪಟಿಗೆ ಅಲ್ಪವಿರಾಮ

ಸಿನೆಮಾ ಮತ್ತು ಸರ್ಕಾರದ ಜಟಾಪಟಿಗೆ ಅಲ್ಪವಿರಾಮ

Subscribe to Filmibeat Kannada

ರಿಮೇಕು ಚಿತ್ರಗಳಿಗೂ ಸಹಾಯಧನ ಮತ್ತು ತೆರಿಗೆ ವಿನಾಯಿತಿ ನೀಡಬೇಕೆಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟಕೊಂಡು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಕರೆದಿದ್ದ ಫೆ.14ರ ಚಿತ್ರೋದ್ಯಮ ಬಂದ್ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ.

ಮುಂಬರುವ ಬಜೆಟ್‌ನಲ್ಲಿ ಚಿತ್ರೋದ್ಯಮದ ಬೇಡಿಕೆಗಳನ್ನು ಈಡೇರಿಸಲಾಗುವುದು ಮತ್ತು ಅಭ್ಯುದಯಕ್ಕಾಗಿ ಸರ್ವರೀತಿಯ ಪ್ರಯತ್ನ ಮಾಡಲಾಗುವುದು ಎಂಬ ಭರವಸೆ ಸರ್ಕಾರದಿಂದ ಸಿಕ್ಕಿದ್ದರಿಂದ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ. ಬಜೆಟ್‌ನಲ್ಲಿ ಭರವಸೆಗಳು ಈಡೇರದಿದ್ದರೆ ಫೆಬ್ರವರಿ 29ರಂದು ಮುಷ್ಕರ ಹೂಡಲಾಗುವುದು ಎಂದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಜೋ ಸೈಮನ್ ದಟ್ಸ್‌ಕನ್ನಡಕ್ಕೆ ತಿಳಿಸಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಸಭೆಯ ನಂತರ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಬೇಡಿಕೆಗಳ ಅಹವಾಲನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರು ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖ್ಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಅವರು, ಚಿತ್ರೋದ್ಯಮದ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಬೇಡಿಕೆ ಈಡೇರಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸಂದೇಶ್ ನಾಗರಾಜ್ ಹೇಳಿದ್ದಾರೆ.

ಉದ್ಯಮದ ಉಳಿವಿಗಾಗಿ ರಿಮೇಕು ಸ್ವಮೇಕೆನ್ನದೆ ಎಲ್ಲ ಚಿತ್ರಗಳಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸಿ ಚಿತ್ರಕರ್ಮಿಗಳು ಹೋರಾಟಕ್ಕಿಳಿದಿದ್ದಾರೆ.

(ದಟ್ಸ್‌ಸಿನಿ ವಾರ್ತೆ)

ಪೂರಕ ಓದಿಗೆ
ಸಿನಿಮಾ ಮತ್ತು ಸರಕಾರದ ನಡುವೆ ಜಟಾಪಟಿ
ಎಲ್ಲಾ ಕನ್ನಡ ಚಿತ್ರಗಳಿಗೂ ಸಬ್ಸಿಡಿಗೆ ಆಗ್ರಹ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada