»   » ಆದಿನಗಳು ನಿರ್ದೇಶಕರಿಂದ ಮತ್ತೊಂದು ಚಿತ್ರ

ಆದಿನಗಳು ನಿರ್ದೇಶಕರಿಂದ ಮತ್ತೊಂದು ಚಿತ್ರ

Subscribe to Filmibeat Kannada
Chaitanya
ಕಳೆದ ವರ್ಷ ತೆರೆಕಂಡು ಬಹಳ ಯಶಶ್ವಿ ಪ್ರದರ್ಶನ ಕಂಡ 'ಆ ದಿನಗಳು' ಚಿತ್ರದ ನಿರ್ದೇಶಕ ಚೈತನ್ಯ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ನಾಯಕರಾಗಿ ಚೇತನ್ ಅವರೇ ಇರುತ್ತಾರೆ.

ಚಿತ್ರಕಥೆ ಸಿದ್ಧವಾಗಿದ್ದು, ಲೇಖಕರಾದ ರಾಮಣ್ಣ ಕೊತೆಗನಹಳ್ಳಿ ಮತ್ತು ಕೆ ವೈ ನಾರಾಯಣ ಸ್ವಾಮಿ ಸಂಭಾಷಣೆ ಬರೆದಿದ್ದಾರೆ. ಇಳಯರಾಜ ಅವರ ಸಂಗೀತ ಚಿತ್ರಕ್ಕಿದೆ.

ಚೇತನ್ ,ನಿರ್ದೇಶಕರಿಗೆ ಮತ್ತೊಮ್ಮೆ ಜೊತೆಯಗುತ್ತಿದ್ದಾರೆ. ಪ್ರಸ್ತುತ ಅಮೆರಿಕಕ್ಕೆ ತೆರಳಿರುವ ಚೇತನ್ ಬೆಂಗಳೂರಿಗೆ ಹಿಂದಿರುಗಿದ ಕೂಡಲೇ ಶೂಟಿಂಗ್ ಕೆಲಸ ಶುರು ಮಾಡುತ್ತೇವೆ ಎಂದು ಚೈತನ್ಯ ಅವರಿಗೆ ತಿಳಿಸಿದ್ದಾರೆ. 'ಸ್ಲಂ ಬಾಲ' ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿರುವ ಚೈತನ್ಯ ವಾಸ್ತವಕ್ಕೆ ಹತ್ತಿರವಾದ ನಿರೂಪಣೆ ಹಾಗು ಮನಸ್ಸಿಗೆ ತಟ್ಟುವ ಸನ್ನಿವೇಶಗಳಿಂದಾಗಿ ಸುಮನಾ ಕಿತ್ತೂರು ತಮ್ಮ ಮೊದಲ ನಿರ್ದೇಶನದಲ್ಲಿ ಗೆದ್ದಿದ್ದಾರೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada