For Quick Alerts
  ALLOW NOTIFICATIONS  
  For Daily Alerts

  ಜೂ 17ರಂದು ಪಿವಿಆರ್ ನಲ್ಲಿ ಬೆಟ್ಟದ ಜೀವ ರಿಲೀಸ್

  By Mahesh
  |

  ಅವಾರ್ಡ್ ವಿನ್ನಿಂಗ್ ಸಿನಿಮಾ ಥೇಟರ್ ಗೆ ಬರೋಲ್ಲ ನಾವು ನೋಡೋಕೆ ಆಗೋಲ್ಲ ಎನ್ನುವ ಕನ್ನಡ ಪ್ರೇಮಿಗಳಿಗೆ ಸವಿ ಸುದ್ದಿ ಇಲ್ಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಬೆಟ್ಟದ ಜೀವ ಚಲನಚಿತ್ರ ಈ ವಾರ ಬೆಂಗಳೂರಿನಲ್ಲಿ ಬಿಡುಗಡೆ ಭಾಗ್ಯ ಪಡೆಯಲಿದೆ.

  ಜೂನ್ 17 ರಂದು ಪಿವಿಆರ್ ಕೋರಮಂಗಳ, ಮಲ್ಲೇಶ್ವರಂನ ಐನೋಕ್ಸ್ ಮಂತ್ರಿ ಮಾಲ್ ಗೆ ಹೋದರೆ ಅಪ್ಪಟ ಕನ್ನಡ ಮಣ್ಣಿನ ಸದಭಿರುಚಿ ಚಿತ್ರವನ್ನು ಕಾಣಬಹುದು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹೋದರೆ ಥೇಟರ್ ನಲ್ಲಿ ಹೆಚ್ಚು ದಿನ ಚಿತ್ರ ಉಳಿಯುತ್ತದೆ ಎಂಬ ನಗ್ನ ಸತ್ಯವನ್ನು ಹೊರಗೆಡವಲೇ ಬೇಕು. ಚಿತ್ರ ಚೆನ್ನಾಗಿದ್ದರೂ ಥೇಟರ್ ನಲ್ಲಿ ಹೆಚ್ಚು ದಿನ ಇರಲಿಲ್ಲ ಎಂದು ಕೊರಗದೆ ಹೆಚ್ಚೆಚ್ಚು ಜನ ಥೇಟರ್ ಗೆ ಹೋಗಿ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದು ಹ್ಯಾಟ್ರಿಕ್ ನಿರ್ದೇಶಕ ಪಿ ಶೇಷಾದ್ರಿ ಕೇಳಿಕೊಂಡಿದ್ದಾರೆ.

  ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರವನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ದತ್ತಣ್ಣ, ಸುಚೇಂದ್ರ ಪ್ರಸಾದ್, ರಾಮೇಶ್ವರಿ ವರ್ಮ, ಲಕ್ಷ್ಮಿ ಹೆಗಡೆ ಮುಂತಾದವರ ಮನೋಜ್ಞ ಅಭಿನಯವನ್ನು ಮೆಚ್ಚಲು ಒಮ್ಮೆಯಾದರೂ ಚಿತ್ರಮಂದಿರಕ್ಕೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ತಿಳಿಸಿ.

  1943 ಪ್ರಕಟಗೊಂಡ ಕಾರಂತರ ಈ ಕೃತಿ ಆಧಾರ ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪರಿಸರ ಚಿತ್ರ ಎಂದು ಪ್ರಶಸ್ತಿ ಸಿಕ್ಕಿದೆ. ಆದರೆ, ಇದರಲ್ಲಿ ಮಾನವ ಸಂಬಂಧಗಳು, ಜೀವನ ಪ್ರೀತಿ, ಹಿರಿ ತಲೆಗಳನ್ನು ಕಾಯುವುದು ಹೇಗೆ ಎಂಬ ಅಂಶಗಳು ಅದ್ಭುತವಾಗಿ ಹೆಣೆಯಲ್ಪಟ್ಟಿದೆ. ಸುಂದರ ಪರಿಸರವನ್ನು ಅನಂತ್ ಅರಸ್ ಸೆರೆಹಿಡಿದಿದ್ದಾರೆ. ದತ್ತಣ್ಣ ಅವರ ಅಭಿನಯದ ಶಕ್ತಿ ಕಾಣಲು ತಪ್ಪದೇ ಚಿತ್ರಮಂದಿರಕ್ಕೆ ಭೇಟಿ ಕೊಡಿ.

  English summary
  Bettada Jeeva National Award Winning Kannada Film directed by P Sheshadri and produced by Basant Kumar Paril is releasing on 17 June 2011 at PVR-Koramamnga and Inox-Mantri, Malleshwaram. Movie based on K Shivarama Karantha's novel by same name. It has Dattanna, Suchendra Prasad, Lakshmi Hegde in the lead

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X