ಕಾಮಪುರುಷರ ಬಗ್ಗೆ ನಟಿಯರ ಸೀಕ್ರೆಟ್ ಡಿಸೈರ್
ಅದೊಂದು ಸಕತ್ ಪಾಶ್ ಪಾರ್ಟಿ. ಹೈದಾರಾಬಾದಿನ ಐಷಾರಾಮಿ ಏರಿಯಾದಲ್ಲಿ ನಡೆದಿತ್ತು. ಅಲ್ಲಿ ಸೇರಿದ್ದವರು ಬರೀ ಬಣ್ಣದ ಬೆಡಗಿಯರು ಅರ್ಥಾತ್ ಸಿನಿಮಾ ನಟಿಯರು ಹಾಗೂ ಶ್ರೀಮಂತ ಕನ್ಯೆಯರು ಮಾತ್ರ.
ಪಾರ್ಟಿ ಮಧ್ಯೆದಲ್ಲಿ ಲೇಡಿಸ್ ಗಳೆಲ್ಲ ಸಣ್ಣದೊಂದು ರೌಂಡ್ ಪೆಗ್ ಸೇರಿದ ಮೇಲೆ ಒಳಗಿರುವ 'ಪರಮಾತ್ಮ' ಜಾಗೃತಗೊಂಡು ಇಂಡಸ್ಟ್ರೀಯಲ್ಲಿರೋ ಅಮಾಯಕ ಹೀರೋಗಳ ಮೇಲೆ ಕಣ್ಣು ಹಾಕಲು ಸೂಚಿಸಿದ್ದಾನೆ.
ಸಿನಿ ಜಗತ್ತಿನ ಕಾಮಪುರುಷರ ಕುರಿತು ಮಾತುಕತೆ ಆರಂಭಗೊಂಡು ವೋಟಿಂಗ್ ಮಾಡಲು ಎಲ್ಲರೂ ನಿರ್ಧರಿಸಿದರಂತೆ. ಮೊದಲಿಗೆ ತೆಳ್ಳನೆಯ ಬೆಡಗಿಯೊಬ್ಬರು ಸೂರ್ಯ ದಿ ಬೆಸ್ಟ್ ಅಂದಳಂತೆ. ಅದರೆ, ಪ್ರಣಯದಲ್ಲಿ ಸೂರ್ಯ ಇನ್ನೂ ಪಳಗ ಬೇಕಂತೆ.
ಮುಂಬೈ ಕಡೆ ಎಳೆ ನಟಿ ಇಲ್ಲ ನಂಗೆ ಶಾರುಖ್ ಖಾನ್ ಓಕೆ ಅಂದ್ಳಂತೆ. ಮತ್ತೆ ಕೆಲವರು 'ದೂಕುಡು' ಮಹೇಶ್ ನಗೆಗೆ ಮನೆ ಸೋತರೆ, ಮತ್ತೆ ಹಲವರು ಮಾಧವನ್ ಜೊತೆ ರಾತ್ರಿ ಕಳೆಯಲು ಅಡ್ಡಿಯಿಲ್ಲ ಎಂದರಂತೆ.
ಸಾಫ್ಟ್ ಚಾಕಲೇಟ್ ಹೀರೋಗಳ ನಂತರ ಕೊನೆಗೆ ರೆಬೆಲ್ ಪ್ರಭಾಸ್ ಒಬ್ಬನೇ ಚಾಲು ಎಂದು ತೆಲುಗು ಮಿಶ್ರಿತ ತಮಿಳಿನ ನಟಿ ಕುಣಿದಳಂತೆ. ಸಿದ್ದಾರ್ಥ್, ರಣಬೀರ್ ಕೂಡಾ ಯುವ ನಟಿಯರ ಕಣ್ಮಣಿಯಾಗಿ ಮೆರೆದಿದ್ದಾನೆ.
ಕೊನೆಗೆ ಹೃತಿಕ್ ಜೊತೆ ಮಂಚ ಹಂಚಿಕೊಂಡರೆ ಆಹಾ ಓಹೋ ಎಂದು ಡ್ಯಾನ್ಸಿಂಗ್ ನಟಿ ಹೇಳಿದರೆ, ಸರಸದಲ್ಲಿ ರವಿತೇಜನೇ ಎತ್ತಿದ ಕೈ.
ಸಿನಿಮಾದಲ್ಲೇ ಹಾಂಗೆ ಇನ್ನೂ ಖಾಸಗಿಯಾಗಿ ಸಿಕ್ಕಿಬಿಟ್ಟರೆ... ನಂಗೆ ನಾಚಿಕೆ ಆಗುತ್ತೆ ಎಂದು ಹೇಳಿ ಮುಖ ಮುಚ್ಚಿಕೊಂಡಳಂತೆ. ಅಪ್ಪಿತಪ್ಪಿ ಕೂಡಾ ಯಾರೂ ಕಮಲ್ ಅಂಕಲ್ ಬಗ್ಗೆ ಚಕಾರ ಎತ್ತಿಲ್ಲವಂತೆ. ಆದರೂ ಕಮಲ್ ಕಿಸ್ಸಿಂಗ್ ಸ್ಟಾರ್ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತದೆ ವರದಿ.
ಟಾಲಿವುಡ್ ಗಾಸಿಪ್ ವರದಿಗಾರರು ಕೊಟ್ಟ ಮಾಹಿತಿಯಲ್ಲಿ ನಟಿಯರ ಹಾಗೂ ಅವರ ಕಾಮಬಯಕೆಗೆ ಸಿಲುಕಿದ ನಟರ ವಿವರಗಳಿದ್ದರೂ ಪೂರ್ಣ ಮಾಹಿತಿ ಹೊರ ಹಾಕುವಂತಿಲ್ಲ.
ಏಕೆಂದರೆ ಗಾಸಿಪ್ ನ್ಯೂಸ್ ನ ವಿಕಿಲೀಕ್ಸ್ ಥರಾ ಹೊರಬೀಡೋಕೆ ಅಯ್ ತುಂದಾ ಸಾರ್ ಎಂದು ತೆಲುಗು ಮಿಶ್ರಿತ ಕನ್ನಡದಲ್ಲಿ ಬಾತ್ಮಿದಾರರು ಫೋನ್ ಕಾಲ್ ಕಟ್ ಮಾಡಿದರು.


Click it and Unblock the Notifications











