Just In
- 39 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 1 hr ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 2 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 3 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- News
13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ವಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುನಿಯಾ ವಿಜಯ್ ಪ್ರಾಣಾಪಾಯದಿಂದ ಪಾರು
ನಟ ದುನಿಯಾ ವಿಜಯ್ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆಯಲ್ಲಿ ಭರದಿಂದ ಸಾಗುತ್ತಿರುವ 'ಚಂಡ್ಯ' ಚಿತ್ರದ ಸಾಹಸ ಚಿತ್ರೀಕರಣ ವೇಳೆ ಈ ಘಟನೆ ಭಾನುವಾರ (ಜೂ.12) ಸಂಭವಿಸಿದೆ. ಈ ಒಂದು ಸಾಹಸ ಸನ್ನಿವೇಶದ ವೇಳೆ ಒಂಚೂರು ಮೈಮರೆತ್ತಿದ್ದರೂ ವಿಜಯ್ ತಲೆ ಅಥವಾ ಬೆನ್ನು ಮೂಳೆ ಮುರುದುಹೋಗುವ ಸಂಭವವಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಿಷಯ ಇಷ್ಟು ಸೀರಿಯಸ್ ಆಗಿದ್ದರೂ ದುನಿಯಾ ವಿಜಯ್ ಮಾತ್ರ ಹಗುರವಾಗಿ ತೆಗೆದುಕೊಂಡಿದ್ದಾರೆ. "ಚಿತ್ರೀಕರಣದ ವೇಳೆ ಸಾಕಷ್ಟು ಹೊಡೆತ ತಿಂದಿದ್ದೀನಿ. ಇದು ನನಗೆ ಅಭ್ಯಾಸವಾಗಿ ಹೋಗಿದೆ. ಈಗಲೂ ಕಾಲಿಗೆ ಪೆಟ್ಟುಬಿದ್ದು ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಚಿತ್ರೀಕರಣ ನಿಲ್ಲಬಾರದು ಪಾಲ್ಗೊಂಡಿದ್ದೇನೆ" ಎಂದಿದ್ದಾರೆ ವಿಜಯ್.
ಮೂಲಗಳ ಪ್ರಕಾರ, ವಿಜಯ್ ಎಡಗಾಲಿಗೆ ಐದು ಹೊಲಿಗೆ ಹಾಕಲಾಗಿದೆ. ಆದರೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಸದ್ಯಕ್ಕೆ ನೋವು ನಿವಾರಕ ತೆಗೆದುಕೊಂಡಿದ್ದೇನೆ. ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಿದರೆ ನಿರ್ಮಾಪಕ ನೋವು ಏನೂ ಎಂಬುದು ನನಗೆ ಗೊತ್ತು ಎಂದಿದ್ದಾರೆ ವಿಜಯ್. ಅಂದಹಾಗೆ 'ಭೀಮಾ ತೀರದಲ್ಲಿ' ಚಿತ್ರಕ್ಕೆ 'ಚಂಡ್ಯ' ಎಂದು ಮರುನಾಮಕರಣ ಮಾಡಲಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)