»   » ಪಂಚನಾಯಕರ ಮುದ್ದಿನ ನಾಯಕಿಯಾಗಿ ಜನ್ನಿಫರ್

ಪಂಚನಾಯಕರ ಮುದ್ದಿನ ನಾಯಕಿಯಾಗಿ ಜನ್ನಿಫರ್

Subscribe to Filmibeat Kannada
ಕನ್ನಡ ಚಿತ್ರರಂಗ ಬಾಲಿವುಡ್‌ಗಿಂತ ಕಡಿಮೆ ಇಲ್ಲ ಎನ್ನುವಷ್ಟು ಮುಂದುವರೆಯುತ್ತಿದೆ. ಈ ಉನ್ನತಿಗೆ ಕಾರಣ ಧೀಮಂತ ನಿರ್ಮಾಪಕರು. ಸೌಂದರ್ಯ ನಮನ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಮಸ್ತ್ ಮಜಾ ಮಾಡಿ' ಚಿತ್ರಕೂಡ ಅದ್ದೂರಿಯಾಗಿ ಮೂಡಿಬರುತ್ತಿದೆ.

ಪಂಚನಾಯಕರ ಅಭಿನಯದಿಂದ ಎಲ್ಲರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಮತ್ತೊಂದು ಗಮನಾರ್ಹ ವಿಷಯವಿದೆ. ಅದೇನೆಂದರೆ 'ಮಸ್ತ್ ಮಜಾ ಮಾಡಿ' ಚಿತ್ರದ ಹಾಡೊಂದಕ್ಕೆ ಹತ್ತು ಪ್ರಸಿದ್ದ ನಾಯಕಿಯರು ಹಾಗೂ ಸುಪ್ರಸಿದ್ದ ನಾಯಕ ಹೆಜ್ಜೆಹಾಕಲಿದ್ದಾರೆ. 50ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತಿರುವ ಈ ಗೀತೆಯ ಚಿತ್ರೀಕರಣ ಸಮಯದಲ್ಲಿ ದೇಣಿಗೆ ಸಂಗ್ರಹಿಸುವುದಾಗಿ ತಿಳಿಸಿರುವ ನಿರ್ಮಾಪಕರು ಬರುವ ಹಣವನ್ನು ಅಂಗವಿಕಲರ ಕಲ್ಯಾಣ ಹಾಗೂ ಅನಾಥಾಶ್ರಮ ನಿರ್ವಹಣೆಯಂತಹ ಸತ್ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದಿದ್ದಾರೆ. ಎರಡು ವಿಶೇಷ ಸೆಟ್‌ಗಳಲ್ಲಿ ಚಿತ್ರೀಕೃತವಾಗುವ ಈ ಗೀತೆಯನ್ನು ಎಲ್ಲಾ ಕಲಾವಿದರ ದಿನಾಂಕ ಸಿಕ್ಕ ಕೂಡಲೆ ಚಿತ್ರೀಕರಿಸಿಕೊಳ್ಳುವುದಾಗಿ ಜಗದೀಶ್ ತಿಳಿಸಿದ್ದಾರೆ.

ಪ್ರಸ್ತುತ 'ನಂದ' ಚಿತ್ರವನ್ನು ನಿರ್ದೇಶಿಸುತ್ತಿರುವ ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ಪಂಚನಾಯಕರಾಗಿ ಸುದೀಪ್, ವಿಜಯರಾಘವೇಂದ್ರ, ದಿಗಂತ್, ನಾಗಕಿರಣ್, ಕೋಮಲ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಪಂಚನಾಯಕಯರಿಗೆ ಏಕ ನಾಯಕಿಯಾಗಿ ಜನ್ನಿಫರ್ ಕೊತ್ವಾಲ್ ಅಭಿನಯಿಸಿದ್ದಾರೆ. ರಂಗಾಯಣರಘು, ಸಿಹಿಕಹಿಚಂದ್ರು ಮೊದಲಾದವರು ಇವರೊಂದಿಗಿದ್ದಾರೆ. ಬಾಲಾಜಿ ಸಂಗೀತ, ಎಂ.ಆರ್.ಸೀನು ಛಾಯಾಗ್ರಹಣ ಹಾಗೂ ರವಿವರ್ಮರ ಸಾಹಸ 'ಮಸ್ತ್ ಮಜಾ ಮಾಡಿ' ಚಿತ್ರಕ್ಕಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ
ನಾಲ್ಕು ನಟರೊಂದಿಗೆ 'ಮಸ್ತ್ ಮಜಾ ಮಾಡಿ'!
ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada