ಶೈಲೂ ಯಶಸ್ಸಿಗೆ ಗಣೇಶ್ 'ಬೀಡಿ ಧಮ್' ವರ್ಕೌಟ್
ಚೆಲುವಿನ ಚಿತ್ತಾರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಎಸ್ ನಾರಾಯಣ್ ಜೋಡಿ ಮತ್ತೊಮ್ಮೆ 'ಶೈಲೂ' ಮೂಲಕ ಗೆಲುವಿನ ಚಿತ್ತಾರ ಬೀರಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಶೈಲೂ ಚಿತ್ರ ಭರ್ಜರಿ ಓಪನಿಂಗ್ ಹಾಗೂ ಮುಂದುವರಿದ ಬಾಕ್ಸ್ ಆಫೀಸ್ ಗಳಿಕೆ ಮೂಲಕ ಸೂಪರ್ ಹಿಟ್ ಆಗುವ ಲಕ್ಷಣ ಸ್ಪಷ್ಟವಾಗಿದೆ.
ಈ ಚಿತ್ರದಲ್ಲಿ ನಟ ಗಣೇಶ್, ಬೀಡಿ ಸೇದುವ ದೃಶ್ಯಗಳಿವೆ. ಪೋಸ್ಟರಿನಲ್ಲೂ ಕೂಡ ಗಣೇಶ್ ಬೀಡಿ ಹಿಡಿದಿರುವ ಫೋಟೋ ಕಣ್ಣು ಕುಕ್ಕುತ್ತಿದೆ. ಸಾಕಷ್ಟು ಅನುಭವಿಯಂತೆ ಬೀಡಿ ಸೇದಿರುವ ಗಣೇಶ್ ರನ್ನು ಅದಕ್ಕಾಗಿ ಸ್ಪೆಷಲ್ ಪ್ರಾಕ್ಟೀಸ್ ಏನಾದ್ರೂ ಮಾಡಿದ್ದೀರಾ ಎಂದು ಕೇಳಿದಾಗ, ಯಾವ ಸಂಕೋಚವಿಲ್ಲದೇ ಉತ್ತರಿಸಿದ್ದಾರೆ.
"ನಾನು ಚಿಕ್ಕವನಿದ್ದಾಗ ಶಾಲಾ ದಿನಗಳಲ್ಲಿ ಕದ್ದುಮುಚ್ಚಿ ಬೀಡಿ ಸೇದುತ್ತಿದ್ದೆ. ಅದೀಗ ಉಪಯೋಗಕ್ಕೆ ಬಂದಿದೆ. ಇಲ್ಲದಿದ್ದರೆ ಕೆಮ್ಮು, ದಮ್ಮು ಇಲ್ಲದೇ ಅಷ್ಟು ಸಲೀಸಾಗಿ ಬೀಡಿ ಸೇದಲು ನನಗೆಲ್ಲಿ ಸಾಧ್ಯವಾಗುತ್ತಿತ್ತು?" ಎಂದು ನಕ್ಕಿದ್ದಾರೆ. ಪಾತ್ರಕ್ಕೆ ಪೂರಕವಾಗಿರುವ ಈ ಬೀಡಿ, ಗಣೇಶ್ ಪಾತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು ಗ್ಯಾರಂಟಿ.
ಗಣೇಶ್ ಹಿಡಿದಿರುವ ಬೀಡಿ, 'ಗಣೇಶ್ ಕಂಪನಿಯ ಬೀಡಿ' ಎಂದು ಹೇಳಿದಿದ್ದರೆ ಗಣೇಶ್ ಬೀಡಿ ಕಂಪನಿಗೆ ಈ ನಮ್ಮ ಗೋಲ್ಡನ್ ಸ್ಟಾರ್ ರಾಯಭಾರಿ ಆಗಬಹುದಿತ್ತು. ಗಣೇಶ್ ಗೆ 'ಬೀಡಿ' ಯೋಗವಿದ್ದರೂ 'ಗಣೇಶ್ ಬೀಡಿ' ಕಂಪನಿಗೆ 'ಗೋಲ್ಡನ್ ಸ್ಟಾರ್' ಯೋಗವಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











