ರಾಜ್ಯದಾದ್ಯಂತ 112 ಕೇಂದ್ರಗಳಲ್ಲಿ 'ಜಾಕಿ' ಹಂಗಾಮ
ರಾಜ್ಯ ರಾಜಕಾರಣದಲ್ಲಿ ಸುಂಟರಗಾಳಿ ಎದ್ದಿದೆ. ಕನ್ನಡ ಚಿತ್ರೋದ್ಯಮದಲ್ಲೂ ಈ ವಾರ ಸುಂಟರಗಾಳಿ ಬೀಸುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿ ಗೋಚರಿಸಿವೆ. ಕಾರಣ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಜಾಕಿ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ರಾಜ್ಯದಾದ್ಯಂತ ಒಟ್ಟು 112 ಕೇಂದ್ರಗಳಲ್ಲಿ ಅಕ್ಟೋಬರ್ 14ರಂದು ತೆರೆಕಾಣುತ್ತಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಟಿಕೆಟ್ ದೊರೆಯುವುದು ದುಸ್ತರವಾಗಿದೆ. ಹಾಗೆಯೇ ಪ್ರಮೋದ್, ನವರಂಗ್, ಗೋವರ್ಧನ್ ಚಿತ್ರಮಂದಿರಗಳಲ್ಲೂ ಚಿತ್ರ ತೆರೆಕಾಣುತ್ತಿದೆ. ಪಿವಿಆರ್, ಐನಕ್ಸ್, ಫನ್ ಸಿನಿಮಾಸ್, ಎಚ್‌ಎಂಟಿ ಹಾಗೂ ವಿಷನ್ ಸಿನಿಮಾಸ್‌ಗಳಲ್ಲೂ ಜಾಕಿ ಅಬ್ಬರಿಸಲಿದೆ.
ಪುನೀತ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು ಪ್ರಮೋದ್ ಚಿತ್ರಮಂದಿರದ ಮುಂದೆ ಈಗಾಗಲೆ 25 ಅಡಿ ಎತ್ತರದ ಕಟೌಟ್ ಎದ್ದು ನಿಂತಿದೆ. ಈ ಕಟೌಟನ್ನು ಪುನೀತ್ ರಾಜ್ ಕುಮಾರ್ ಸೇನಾ ಸಮಿತಿ, ಶಿವನಗರ ಇವರು ನಿರ್ಮಿಸಿದ್ದಾರೆ.
ಜಾಕಿ ಪುನೀತ್ ರಾಜ್ ಕುಮಾರ್ ದುನಿಯಾ ಸೂರಿ ವಿ ಹರಿಕೃಷ್ಣ ಪಾರ್ವತಮ್ಮ ರಾಜ್ ಕುಮಾರ್ jackie puneeth rajkumar actress bhavana v harikrishna duniya soori parvathamma rajkumar


Click it and Unblock the Notifications