ಪರಮಾತ್ಮನಿಗೆ ಕಟುಮಸ್ತಾದ ಆಳು ಜಾನ್ ಕೊಕ್ಕಿನ್
'ಪೃಥ್ವಿ' ಮತ್ತು 'ಮೈಲಾರಿ' ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಜಾನ್ ಕೊಕ್ಕಿನ್ ಅವರಿಗೆ ಈಗ ಮತ್ತೊಂದು ವಿಲನ್ ಪಾತ್ರ ಸಿಕ್ಕಿದೆ. ಈ ಬಾರಿ ಅವರು ಪುನೀತ್ ರಾಜ್ ಕುಮಾರ್ ಅವರ 'ಪರಮಾತ್ಮ' ಚಿತ್ರದಲ್ಲಿ ಖಳನಟನಾಗಿ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಯೋಗರಾಜ್ ಭಟ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಜಾನ್ ಕೊಕ್ಕಿನ್ ತಮ್ಮ ಅಭಿನಯದ ಮೂಲಕ ಈಗಾಗಲೆ ದಕ್ಷಿಣ ಭಾರತದ ಗಮನಸೆಳೆದಿದ್ದಾರೆ. 'ಪೃಥ್ವಿ' ಚಿತ್ರದಲ್ಲಿನ ಪಾತ್ರ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತ್ತು. ಬಳಿಕ ಅವರು ಮಾಡಿದ'ಮೈಲಾರಿ' ಚಿತ್ರದ ಪಾತ್ರ ಅಷ್ಟೊಂದು ಪವರ್‌ಫುಲ್ ಅಲ್ಲದಿದ್ದರೂ ತಮ್ಮ ಎತ್ತರ, ಕಟು ಮಸ್ತಾದದೇಹದಿಂದ ಗಮನಸೆಳೆದಿದ್ದರು.
ಸದ್ಯಕ್ಕೆ ಪುನೀತ್ ಅವರ 'ಹುಡುಗ್ರು' ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಳಿಕ 'ಪರಮಾತ್ಮ' ಸೆಟ್ಟೇರಲಿದೆ. ಜಯಣ್ಣ ಮತ್ತು ಯೋಗರಾಜ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಚಿತ್ರದಲ್ಲಿ ಮೂವರು ನಾಯಕಿಯರು. ಒಬ್ಬ ನಾಯಕಿ ದೀಪಾ ಎಂಬುದು ಜಗಜ್ಜಾಹೀರಾಗಿದೆ. ಇನ್ನಿಬ್ಬರು ನಾಯಕಿಯರ ಹುಡುಕಾಟದಲ್ಲಿದ್ದಾರೆ ಯೋಗರಾಜ್ ಭಟ್.


Click it and Unblock the Notifications











