»   » ಪ್ರೀತಂ ಗುಬ್ಬಿಯ ಹಾಗೇ ಸುಮ್ಮನೆ ಟ್ರೈಲರ್

ಪ್ರೀತಂ ಗುಬ್ಬಿಯ ಹಾಗೇ ಸುಮ್ಮನೆ ಟ್ರೈಲರ್

Subscribe to Filmibeat Kannada

ಕನ್ನಡ ಸಿನಿಮಾಗಳಿಗೆ ಚಿತ್ರಕಥೆ ಒದಗಿಸುತ್ತಿದ್ದ ಪ್ರೀತಂ ಗುಬ್ಬಿ ಈಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕಿರಣ್ ಹಾಗೂ ಸುಹಾಸಿ ಎಂಬ ಹೊಸಬರೊಂದಿಗೆ ಹಾಗೇ ಸುಮ್ಮನೆ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಧ್ವನಿಸುರುಳಿ ಈಗಾಗಲೇ ಬಿಡುಗಡೆಯಾಗಿದ್ದುಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಗಾರು ಮಳೆ ಹಾಗೂ ಗೆಳಯ ಚಿತ್ರಗಳಿಗೆ ಉತ್ತಮ ಚಿತ್ರಕಥೆ ಬರೆದ ಪ್ರೀತಂ ಗುಬ್ಬಿ ನಂತರಗಣೇಶ್ ರ ಅರಮನೆಗೆ ಕಥೆ ಒದಗಿಸಿದ್ದರು. ಮುಂಗಾರು ಮಳೆಯ ಬಹುತೇಕ ತಾಂತ್ರಿಕ ವರ್ಗ ಹಾಗೆ ಸುಮ್ಮನೆ ಚಿತ್ರದಲ್ಲೂ ತೊಡಗಿಕೊಂಡಿದೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಎಸ್.ಕಿರಣ್ ಛಾಯಾಗ್ರಹಣ, ದೀಪುಕುಮಾರ್ ಸಂಕಲನವಿದೆ. ಪ್ರೇಮ ಕಥಾ ಹಂದರವಿರುವ ಈ ಚಿತ್ರದಲ್ಲಿ ಯಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಹಾಗೂ ಶರತ್ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada