ಗೌರ್ಮೆಂಟ್ ಕಾಲೇಜಲ್ಲಿ ಕಿಟ್ಟಿ ಪ್ರಿಯಾಮಣಿ ಕೋ ಕೋ
"ಗೌರ್ಮೆಂಟ್ ಕಾಲೇಜು ಹುಡುಗರು ನಾವು ಹುಷಾರು, ರಾಗಿ ಮುದ್ದೆ ಜೊತೆಗೆ ಹೊಡಿತೀವ್ ಬಸ್ಸಾರು.." ಇದು ಕೋ ಕೋ ಚಿತ್ರದ ಹಾಡು. ಸರ್ಕಾರಿ ಕಾಲೇಜಿನ ಹುಡುಗರು ಹಾಗೂ ಖಾಸಗಿ ಕಾಲೇಜಿನ ಹುಡುಗಿಯರ ನಡುವೆ ನಡೆಯುವ ಈ ಹಾಡಿನ ಚಿತ್ರೀಕರಣ ದಯಾನಂದ ಸಾಗರ್ ಕಾಲೇಜು ಆವರಣ, ಇನ್ನೋವೆಟಿವ್ ಫಿಲಂ ಸಿಟಿ ಮತ್ತು ಬಿ.ಜಿ.ಎಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಈ ಹಾಡಿನ ಚಿತ್ರೀಕರಣದಲ್ಲಿ ಶ್ರೀನಗರ ಕಿಟ್ಟಿ , ಪ್ರಿಯಾಮಣಿ ಹಾಗೂ ಸಹ ಕಲಾವಿದರು ಅಭಿನಯಿಸಿದರು. ಭರಣಿ ಮಿನರಲ್ಸ್ ಲಾಂಛನದಲ್ಲಿ ಭಾಸ್ಕರ್ ಅವರು ನಿರ್ಮಿಸುತ್ತಿರುವ 'ಕೋಕೋ" ಚಿತ್ರದ ಈ ಹಾಡನ್ನು ಸಂತು ಅವರು ಬರೆದಿದ್ದಾರೆ. ಪ್ರದೀಪ್ ಅಂಥೋಣಿ ಈ ಗೀತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ವಿಭಿನ್ನ ಕಥೆಯನ್ನೊಳಗೊಂಡಿರುವ ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸುತ್ತಿದ್ದಾರೆ. ಚಂದ್ರು ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಆದಿ ಅವರ ಸಹ ನಿರ್ಮಾಣವಿದೆ. ರಮಣಗೋಗುಲ ಅವರ ಸಂಗೀತ ನಿರ್ದೇಶನವಿರುವ "ಕೋ ಕೋ" ಗೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ.
ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಜೊತೆಗೆ ಶ್ರೀಹರಿ, ಹರ್ಷಿಕಾ ಪೂಣಚ್ಚ, ರವಿಕಾಳೆ, ರಂಗಾಯಣ ರಘು, ಸಂಪತ್‌ಕುಮಾರ್, ಸುರೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಮಿತ್ರಾ, ರಘುರಾಂ, ಮೋಹನ್ ಜುನೇಜಾ, ಬಿರಾದಾರ್, ಜಿಮ್‌ರವಿ, ಪದ್ಮಜಾರಾವ್, ವಿಜಯಸಾರಥಿ, ಯತಿರಾಜ್, ಸ್ವಯಂವರ ಚಂದ್ರು ಹೀಗೆ ಕಲಾವಿದರ ದೊಡ್ಡ ಬಳಗವೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











