For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರಕ್ಕೆ ಅಪ್ಪಳಿಸಲಿದೆ ಭಾರೀ 'ತೂಫಾನ್'

  |

  ಸಾರಥಿಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ ಕನ್ನಡ ಚಿತ್ರೋದ್ಯಮ. ಪರಮಾತ್ಮ ಚಿತ್ರವೂ ಗಳಿಕೆಯಲ್ಲಿ ಯಶಸ್ವಿಯಾಗಿದೆ. ಇದೀಗ ಬಿಡುಗಡೆ ಆಗಿರುವ ವಿಷ್ಣುವರ್ಧನ ಹಾಗೂ ಶೈಲೂ ಚಿತ್ರಗಳು ಕೂಡ ಕನ್ನಡ ಚಿತ್ರೋದ್ಮಕ್ಕೆ ಭರವಸೆಯ ಬೆಳಕು ಮೂಡಿಸಿದೆ. ಜೊತೆಗೆ ಭರವಸೆ ಮೂಡಿಸಿರುವ ಇನ್ನೊಂದು ಹೊಸಬರ ಚಿತ್ರ 'ತೂಫಾನ್' ಸದ್ಯದಲ್ಲೇ ತೆರೆಗೆ ಬರಲಿದೆ.

  ಒಲವೇ ಮಂದಾರ, ಲೈಫು ಇಷ್ಟೇನೆ ಮುಂತಾದ ಹೊಸಬರ ಚಿತ್ರಗಳು ಈ ವರ್ಷ ಸಾಕಷ್ಟು ಸದ್ದು ಹಾಗೂ ಸುದ್ದಿ ಮಾಡಿವೆ. ಅದೇ ಸಾಲಿಗೆ ಸೇರಲಿರುವ ಚಿತ್ರ ತೂಫಾನ್. ಸ್ಮೈಲ್ ಸೀನು ಎಂಬ ಹೊಸ ನಿರ್ದೇಶಕ, 'ಶಿಶಿರ' ಖ್ಯಾತಿಯ 'ಯಶಸ್ ಸೂರ್ಯ' ಎಂಬ ಹ್ಯಾಂಡ್ ಸಮ್ ಹೀರೋ ಸಂಗಮದಲ್ಲಿ ಮೂಡಿ ಬಂದಿರುವ ಚಿತ್ರ ಆಕರ್ಷಕ ಶೀರ್ಷಿಕೆಯ ತೂಫಾನ್.

  ಈ ಚಿತ್ರದಲ್ಲಿ ನಾಯಕ ನಟ ಯಶಸ್ ಸೂರ್ಯ ಅವರಿಗೆ ನಾಯಕಿಯಾಗಿ ತೆಲುಗು ನಟಿ ನಕ್ಷತ್ರ ಇದ್ದಾರೆ. ಪ್ರಮುಖ ಪಾತ್ರಗಳಲ್ಲಿ ಖಾಸಗಿ ವಾಹಿನಿಯ ಚಂದನ್ ಹಾಗೂ ಸಾಧು ಕೋಕಿಲ ಇದ್ದಾರೆ. ಹೆಚ್ ಜಡೇಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಲ್ವಿನ್ ಜೋಶ್ವಾ ಸಂಗೀತ ಹಾಗೂ ರವಿ ಸುವರ್ಣ ಛಾಯಾಗ್ರಹಣ ಇದೆ. ಈ ತಿಂಗಳ ಕೊನೆಯಲ್ಲಿ ತೂಫಾನ್ ಚಿತ್ರ ತೆರಗೆ ಬರುವ ಸಾಧ್ಯತೆ ಇದೆ. (ಒನ್ ಇಂಡಿಯಾ ಕನ್ನಡ)

  English summary
  New comers Kannada Movie Toofan is releasing very shortly. Yashas Surya and Nakshatra Pair is the main lead and direction smile Seenu. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X