ಅಪ್ಪಳಿಸಲಿದೆ ತೂಫಾನ್; ನಡುಗುತ್ತಿದೆ ಗಾಂಧಿನಗರ
ಬಹುನಿರೀಕ್ಷೆಯ ಹೊಸಬರ ಚಿತ್ರ 'ತೂಫಾನ್', ಇದೇ ತಿಂಗಳು ಏಪ್ರಿಲ್ 20, 2012 ರಂದು ಕರ್ನಾಟಕದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಸ್ಮೈಲ್ ಸೀನು' ಎಂಬ ಹೊಸ ನಿರ್ದೇಶಕ ಹಾಗೂ 'ಶಿಶಿರ' ಹಾಗೂ 'ಚಿಂಗಾರಿ' ಚಿತ್ರದಲ್ಲಿ ಅಮೋಘ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿರುವ ನಟ 'ಯಶಸ್ ಸೂರ್ಯ' ಸಂಗಮದ ಚಿತ್ರ ತೂಫಾನ್. ಸಿಕ್ಕ ಸುದ್ದಿಯ ಪ್ರಕಾರ ತೂಫಾನ್ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಈ ಚಿತ್ರದಲ್ಲಿ ನಾಯಕ ನಟ ಯಶಸ್ ಸೂರ್ಯ ಅವರಿಗೆ ನಾಯಕಿಯಾಗಿ ತೆಲುಗು ನಟಿ 'ನಕ್ಷತ್ರ' ಇದ್ದಾರೆ. ಪ್ರಮುಖ ಪಾತ್ರಗಳಲ್ಲಿ ಖಾಸಗಿ ವಾಹಿನಿ ನಿರೂಪಕ ಚಂದನ್ ಹಾಗೂ ಸಾಧು ಕೋಕಿಲ ನಟಿಸಿದ್ದಾರೆ. ಹೆಚ್ ಜಡೇಗೌಡ್ರು ನಿರ್ಮಿಸಿರುವ ಈ ಚಿತ್ರಕ್ಕೆ ಎಲ್ವಿನ್ ಜೋಶ್ವಾ ಸಂಗೀತ ಹಾಗೂ ರವಿ ಸುವರ್ಣ ಛಾಯಾಗ್ರಹಣವಿದೆ.
ಏಪ್ರಿಲ್ 20 ರಂದು ತೆರೆಗೆ ಬರಲಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಕಾರಣ, ಟೈಟಲ್ ಆಕರ್ಷಣೆ. 'ತೂಫಾನ್' ಎಂಬ ಶೀರ್ಷಿಕೆಯೇ ಚೆನ್ನಾಗಿದೆ. ಜೊತೆಗೆ 'an unimagined...... Story' ಎಂಬ ಅಡಿಬರಹವೂ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಬಿಡುಗಡೆಯಾಗುತ್ತಿರುವ 'ಪತ್ರಿಕಾ ಜಾಹೀರಾತು'ಗಳೂ ಗಮನಸೆಳೆಯುವಂತಿವೆ. ಚಿತ್ರ ಚೆನ್ನಾಗಿ ಓಡಿ ಹೊಸ ದಾಖಲೆ ಮೆರೆಯಲಿದೆ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











