ಶಕ್ತಿ ದೇವತೆಯಾಗಿ ಕೆ ಆರ್ ವಿಜಯ ಆಗಮನ

ಕೆ ಆರ್ ವಿಜಯಾ ಅವರು ಭಕ್ತಿ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದ ಕಾಲದಲ್ಲಿ ಅವರ ದಾಳಿಂಬೆಯಂತಹ 'ದಂತಪಂಕ್ತಿ' ಚಿತ್ರರಸಿಕರ ನಿದ್ದೆ ಕೆಡಿಸಿದ್ದದ್ದು ಇತಿಹಾಸ! ರಾಘವೇಂದ್ರ ಸ್ವಾಮಿ ಚಿತ್ರ ಬ್ಯಾನರಿನ ಮೂಲಕ ಆರ್ ವೆಂಕಟೇಶ್ ನಿರ್ಮಿಸುತ್ತಿರುವ 'ಓಂ ಶಕ್ತಿ ಮಹಿಮೆ' ಚಿತ್ರದಲ್ಲಿ 'ಶಕ್ತಿ ದೇವತೆ'ಯಾಗಿ ವಿಜಯ ಅವರು ಕಾಣಿಸಲಿದ್ದಾರೆ.
ನಿರ್ಮಾಪಕ ವೆಂಕಟೇಶ್ ಅವರು ಈ ಹಿಂದೆ ಸುಲ್ತಾನ್, ಬದ್ರಿ ಮತ್ತು ಬಿಡ್ಡ ಚಿತ್ರಗಳನ್ನು ನಿರ್ಮಿಸಿದ್ದರು. ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಬಿಎಂಪಿ ಅಣ್ಣಯ್ಯ ಅವರು ಹೊತ್ತಿದ್ದಾರೆ. ಶ್ರೀ ಕೃಷ್ಣಸಂಧಾನ, ರಾಮಸ್ವಾಮಿ ಕೃಷ್ಣಸ್ವಾಮಿ ಮತ್ತು ಬ್ರಹ್ಮಚಾರಿಗಳು ಸಾರ್ ಬ್ರಹ್ಮಚಾರಿಗಳು ಎಂಬ ಚಿತ್ರಗಳನ್ನು ಈಗಾಗಲೇ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳು. ಚಾಮರಾಜ ಪೇಟೆಯಲ್ಲಿರುವ ವಿಜಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಿತು.
ಚಿತ್ರಕ್ಕೆ ಸಂಭಾಷಣೆ ಕುಣಿಗಲ್ ನಾಗಭೂಷಣ್, ಕತೆ ಜಿ ವೆಂಕಟೇಶ್, ಛಾಯಾಗ್ರಹಣ ಮಲ್ಲಿಕಾರ್ಜುನ್. ತಾರಾಗಣದಲ್ಲಿ ಮೇಘ (ಮುಂಬೈ), ಮೀನಾ, ತಾರಾ, ರೇಖಾ ದಾಸ್, ರಾಮಕೃಷ್ಣ ಇದ್ದಾರೆ. ಜೂನ್ ನಿಂದ ಮೇಲ್ ಮರವತ್ತೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಂತರ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!


Click it and Unblock the Notifications











