ಹೆಬ್ಬಾಳದಲ್ಲಿ ಕೃಷ್ಣನ್ ಮ್ಯಾರೇಜ್ ಸ್ಟೋರಿ
ಉದ್ಯಾನ ನಗರಿಯ ಪ್ರತಿಷ್ಠಿತ ಬಡಾವಾಣೆಗಳಲ್ಲಿ ಹೆಬ್ಬಾಳ ಕೂಡ ಒಂದು. ಈ ಬಡಾವಣೆಯ ಅಣಬೇಲ ನಿವಾಸದಲ್ಲಿ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ದೀಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ರವರ ಸಂಗೀತ ನಿರ್ದೇಶನವಿದೆ.
ಅಜಯರಾವ್, ನಿಧಿಸುಬ್ಬಯ್ಯ, ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಭಾರ್ಗವಿನಾರಾಯಣ್, ಸ್ವಯಂವರಚಂದ್ರು, ನಾಗೇಂದ್ರ ಶಾ, ಸುರೇಶ್‌ಮಂಗಳೂರು, ಬಾಲರಾಜ್, ಜಯಲಕ್ಷ್ಮೀ ಮುಂತಾದ ಕಲಾವಿದರು ಅಭಿನಯಿಸಿದ ಕೆಲವು ಸನ್ನಿವೇಶಗಳ ಚಿತ್ರೀಕರಣ ಈ ಮನೆಯಲ್ಲಿ ನಡೆದಿದೆ ಎಂದು ನಿರ್ದೇಶಕ ನೂತನ್‌ಉಮೇಶ್ ತಿಳಿಸಿದ್ದಾರೆ.
ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಶೇಖರ್‌ಚಂದ್ರ ಛಾಯಾಗ್ರಹಣ, ಶ್ರೀ ಸಂಕಲನ, ರವಿವರ್ಮ ಸಾಹಸ, ಮಂಜು ಮಾಂಡವ್ಯ ಸಂಭಾಷಣೆ ಹಾಗೂ ಚಂಪಕಧಾಮ ಬಾಬು ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಜಯ್‌ರಾವ್, ನಿಧಿಸುಬ್ಬಯ್ಯ ಅಭಿನಯಿಸಿದ್ದಾರೆ.
More from Filmibeat
English summary
Krishnan Marriage Story shooting is progressed in Hebbal, Bangalore. Ajay Rao and Nidhi Subbaiah in the lead roles. Nutan Umesh is directing the film. At present the shooting is brisk progress in Anabela house, Hebbal.
ನಿಧಿ ಸುಬ್ಬಯ್ಯ ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಜಯ್ ರಾವ್ ಹೆಬ್ಬಾಳ ವಿನಯಾ ಪ್ರಸಾದ್ krishnan marriage story ajay rao nidhi subbiah vinaya prasad hebbal


Click it and Unblock the Notifications











