For Quick Alerts
  ALLOW NOTIFICATIONS  
  For Daily Alerts

  ಬೆಸ್ಟ್ ಸ್ಕೂಲ್ ಹುಡುಕಾಟದಲ್ಲಿ ಮಾಧುರಿ ದೀಕ್ಷಿತ್ ಆಂಟಿ!

  By Rajendra
  |

  ಬಾಲಿವುಡ್‌ನ ಒಂದು ಕಾಲದ ರಾಣಿ (ಬಣ್ಣ ಹಚ್ಚಿದರೆ ಈಗಲೂ ರಾಣಿಯೇ) ಮಾಧುರಿ ದೀಕ್ಷಿತ್ ಆಂಟಿ (44) ಈಗ ಬೆಸ್ಟ್ ಸ್ಕೂಲ್ ಹುಡುಕಾಟದಲ್ಲಿದ್ದಾರೆ! ಈ ವಯಸ್ಸಿನಲ್ಲಿ ಕಲಿಯುವುದು ಅಂತಹದ್ದೇನಿದೆ ಅಂತೀರಾ? ಆದರೆ ಶಾಲೆ ಬೇಕಾಗಿರುವುದು ಆಕೆಗಲ್ಲ ಆಕೆಯ ಎರಡು ಮುದ್ದಾದ ಮಕ್ಕಳಿಗೆ.

  ಯುಎಸ್‌ನಿಂದ ಭಾರತಕ್ಕೆ ಮರಳಿರುವ ಮಾಧುರಿ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುಂಬೈನಲ್ಲಿ ಅತ್ಯುತ್ತಮ ಶಾಲೆ ಇದ್ದರೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. 1999ರಲ್ಲಿ ಡೆನ್ವರ್ ಮೂಲದ ಹೃದ್ರೋಗ ತಜ್ಞ ಶ್ರೀರಾಮ್ ಮಾಧವ್ ನೆನೆಯನ್ನು ವರಿಸಿದ್ದರು.

  ಅವರ ಅನುರೂಪ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು. ಮುಂಬೈನ ತಾಜ್ ಹೋಟೆಲ್‌ನಲ್ಲಿ ವಾಸ್ತವ್ಯವಿರುವ ಮಾಧುರಿ ತನ್ನ ಮಕ್ಕಳ ಇನ್ನೂ ಜೆಟ್ ಲ್ಯಾಗ್‌ನಿಂದ ಹೊರಬಂದಿಲ್ಲ ಎಂದಿದ್ದಾರೆ. ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂಬೈನಲ್ಲಿ ಉತ್ತಮ ಶಾಲೆ ಯಾವುದು ಎಂದು ಕೇಳಿದ್ದಾರೆ. ಗೊತ್ತಿದ್ದರೆ ಮಾಧುರಿ ಆಂಟಿಗೆ ಸಹಾಯ ಮಾಡಿ. (ಏಜೆನ್ಸೀಸ್)

  English summary
  Bollywood’s Dhak-Dhak girl Madhuri Dixit is seeking suggestions for the best schools in Mumbai for her kids. "Back in Mumbai! At Taj on Friday for Emeralds for Elephants. Busy settling in. Boys still jet lagging. What is the best school in Mumbai," Madhuri posted on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X