30 ಕೋಟಿ ತೂಗುವ ಮೋಹನ್ ಲಾಲ್, ಮಮ್ಮೂಟಿ

ಆದಾಯ ತೆರಿಗೆ ಇಲಾಖೆ ಈ ದಾಳಿಯಲ್ಲಿ ಸಿಕ್ಕ ಆಸ್ತಿ ವಿವರಗಳನ್ನು ಲೆಕ್ಕ ಹಾಕಿದ್ದು ಒಟ್ಟು ಮೂವತ್ತು ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದಿದೆ. ಆದರೆ, ಪೂರ್ಣ ವಿವರ ಇನ್ನೂ ಹೊರ ಬೀಳಬೇಕಿದೆ.
ಜುಲೈ 22ರಂದು ಕೇರಳ, ತಮಿಳನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿನ ಈ ಇಬ್ಬರು ಖ್ಯಾತ ನಟರ ಮನೆ ಹಾಗೂ ವ್ಯಾಣಿಜ್ಯ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ದಾಳಿಗಳ ಸಂದರ್ಭದಲ್ಲಿ ಲಭ್ಯವಾದ ಅಘೋಷಿತ ನಗದು ಮತ್ತು ಆಭರಣಗಳ ಒಟ್ಟು ಮೌಲ್ಯ 2.8 ಕೋಟಿ ರೂಪಾಯಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಘೋಷಿತ ಆಸ್ತಿ ಮೊತ್ತವನ್ನು ರಿಯಲ್ ಎಸ್ಟೇಟ್ ಹಾಗೂ ವಿದೇಶದಲ್ಲಿ ಬಂಡವಾಳ ಹೂಡಲು ಇಬ್ಬರು ನಟರು ಬಳಸಿದ್ದಾರೆ. ಈ ಚಾಳಿ ಬಾಲಿವುಡ್ ನಿಂದ ಬಂದಿದ್ದು, ಶಾರುಖ್ ಸೇರಿದಂತೆ ಹಲವಾರು ನಟರು, ಮಧ್ಯಪ್ರಾಚ್ಯ ದೇಶಗಳಲ್ಲಿ ಮನೆ ಕಟ್ಟಿಕೊಳ್ಳುವುದು ಕಾಮನ್ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಇ.ಟಿ. ಲೂಕೊಸ್ ಹೇಳಿದ್ದಾರೆ.
ವಿದೇಶದಲ್ಲೂ ವಿಚಾರಣೆ: ವಿದೇಶದಲ್ಲಿ ಬಂಡವಾಳ ಹೂಡಲಾಗಿರುವ ಸ್ಥಿರ ಹಾಗೂ ಚರಾಸ್ತಿ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ವಿದೇಶದಲ್ಲಿರುವ ಬ್ಯಾಂಕ್ ಗಳಲ್ಲಿ ನಟರ ಖಾತೆ ವಿವರ ಸಹ ಇದರಲ್ಲಿ ಸೇರಿದೆ. ಸಂಪೂರ್ಣ ವರದಿ ತಯಾರಿಸಲು ಕನಿಷ್ಠ 2 ತಿಂಗಳಾದರೂ ಬೇಕು ಎಂದು ಲೂಕೊಸ್ ತಿಳಿಸಿದ್ದಾರೆ.


Click it and Unblock the Notifications











