For Quick Alerts
  ALLOW NOTIFICATIONS  
  For Daily Alerts

  ಮುಖ್ಯಮಂತ್ರಿ ಚಂದ್ರು ಮಗನ ಜಿಮ್ ಸಂಸ್ಥೆ ಆರಂಭ

  By Rajendra
  |

  ಕನ್ನಡದ ಖ್ಯಾತ ನಟ, ರಾಜಕಾರಣಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಚಂದ್ರು ಅಸಾಧ್ಯ ಲವಲವಿಕೆಯ ವ್ಯಕ್ತಿ. ಸದಾ ಒಂದಿಲ್ಲೊಂದು ವಿಚಾರವಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲರಾಗಿರುವ ಚಂದ್ರು ಅವರ ಮಕ್ಕಳೂ ಸಹ ಈಗ ಫೀಲ್ಡಿಗಿಳಿದಿದ್ದಾರೆ.

  ಮುಖ್ಯಮಂತ್ರಿ ಚಂದ್ರು ಅವರ ಮೊದಲ ಮಗ ಭರತ್ ಎಂ.ಎಸ್. ಇನ್ಫರ್‌ಮೇಷನ್ ಕಲಿತು ಈಗಾಗಲೇ ಸ್ವಂತದ್ದೊಂದು ಸಾಫ್ಟ್‌ವೇರ್ ಕಂಪೆನಿ ನಡೆಸುತ್ತಿದ್ದಾರೆ. ಎರಡನೇ ಮಗ ಶರತ್ ಚಂದ್ರ ಅತ್ಯುತ್ತಮ ಕ್ರಿಕೆಟ್ ಆಟಗಾರ. ಈಗಾಗಲೇ ಕರ್ನಾಟಕ ಡಿವಿಜನ್‌ನಲ್ಲಿ ಫಾಸ್ಟ್ ಬೌಲರ್ ಆಗಿ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಇದೇ ಶರತ್ ಚಂದ್ರ ಈಗ ಸ್ವಂತದ್ದೊಂದು ಜಿಮ್ ಆರಂಭಿಸಿದ್ದಾರೆ. ಅದರ ಹೆಸರು 'ಜಿಮ್ ಫಾರ್ ಅಥ್ಲೆಟ್'. ಇದು ವಿಶೇಷವಾಗಿ ಆಟಗಾರರಿಗೆಂದೇ ಶುರು ಮಾಡಿರುವ ಜಿಮ್. ಯಾವ ಯಾವ ಆಟಗಾರರಿಗೆ ಯಾವ ರೀತಿಯ ಫಿಟ್‌ನೆಸ್ ಬೇಕು ಎಂಬುದನ್ನು ತೀರ್ಮಾನಿಸಿ ಕೋಚ್ ಮಾಡಲಾಗುತ್ತದೆ. ಆಟಗಾರರಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ.

  ಈಗಷ್ಟೇ ಆರಂಭವಾಗಿರುವ ಜಿಮ್‌ನಲ್ಲಿ ಸದ್ಯ 25ಜನ ತರಬೇತಿ ಆರಂಭಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ಜಿಮ್ ತಿಮ್ಮಯ್ಯ ರಸ್ತೆಯಲ್ಲಿರುವ ಕರ್ನಾಟಕ ಫೈನಾನ್ಷಿಯಲ್ ಕಾರ್ಪೊರೇಷನ್‌ನ ಕೆಳ ಅಂತಸ್ತಿನಲ್ಲಿ ಆರಂಭಗೊಂಡಿದೆ.

  ಶರತ್‌ಚಂದ್ರ ತಮ್ಮ ಫಿಟ್‌ನೆಸ್ ಗುರುಗಳಾದ ಶ್ಯಾಂ ಅವರೊಟ್ಟಿಗೆ ಸೇರಿ ಈ ಸಂಸ್ಥೆ ಆರಂಭಿಸಿದ್ದಾರೆ. ಸಿನಿಮಾ ನಟಿ ಸುಧಾರಾಣಿ ಸಹ ಈ ಜಿಮ್‌ನಲ್ಲಿ ತರಬೇತಿ ಶುರು ಮಾಡಿದ್ದಾರೆ. 6.6 ಅಡಿ ಎತ್ತರವಿರುವ ಶರತ್ ಕ್ರಿಕೆಟ್ ನೊಂದಿಗೆ ಈಗ ಜಿಮ್ ಆರಂಭಿಸಿದ್ದಾರೆ ಮಾತ್ರವಲ್ಲ, ಸಿನಿಮಾಗೆ ಬರುವ ಕನಸನ್ನೂ ಹೊಂದಿದ್ದಾರೆ. ಮಗನ ಎಲ್ಲ ಅಪೇಕ್ಷೆಗಳು, ಕನಸುಗಳಿಗೂ ತಂದೆ ಮುಖ್ಯಮಂತ್ರಿ ಚಂದ್ರು ಮತ್ತು ತಾಯಿ ಪದ್ಮಾ ಅವರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇದ್ದೇಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Renowned actor, theater personality and the chairman of the Kannada Development Authority (KDA) Mukhyamantri Chandru's son Sharath Chandru recently opened gym center Gym for Athlete in Bangalore at Timmayya road. This gym center is specially meant for athletes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X