ಮಕ್ಕಳ ಫ್ಯಾನ್ 'ನಮ್ಮಣ್ಣ ಡಾನ್' ರಮೇಶ್ ಅರವಿಂದ್

By Rajendra

ಇದು ನಿಜಕ್ಕೂ ಹೌದು. ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ 'ನಮ್ಮಣ್ಣ ಡಾನ್' ಮಕ್ಕಳಿಗೆಲ್ಲಾ ಬಿಡುಗಡೆಗೆ ಮುಂಚೆಯೇ ಸಖತ್ ಸಂತೋಷ ನೀಡಿ ಅವರೆಲ್ಲರು ಚಿತ್ರದ ಫ್ಯಾನ್ ಆಗಿ ಬಿಟ್ಟಿದ್ದಾರೆ. ಕಳೆದ ವಾರ ಒಂದು ವಿಶೇಷ ಸಂದರ್ಭವನ್ನು ಈ ಚಿತ್ರಕ್ಕಾಗಿ ಕಲ್ಪಿಸಲಾಯಿತು.

800 ಮಕ್ಕಳನ್ನು ಒಟ್ಟಾರೆ ಸೇರಿಸಿ ಅವರುಗಳಿಂದ 'ನಮ್ಮಣ್ಣ ಡಾನ್' ನಿಮಗೆ ಹೇಗೆ ಅನ್ನಿಸುತ್ತದೆ ಎಂಬುದನ್ನು ಗ್ರಹಿಸಿ ಮಕ್ಕಳಿಗಾಗಿಯೇ ವಿಶೇಷ ಸಿನಿಮಾ ಪೋಸ್ಟರ್ ತಯಾರಿಸುವುದು ನಿರ್ದೇಶಕರ ಹಂಬಲ. ಮಕ್ಕಳ ಮನಸ್ಸಿನಲ್ಲಿ ಚಿತ್ರದ ಬಗ್ಗೆ ಏನಿದೆ ಎಂದು ತಿಳಿದುಕೊಳ್ಳವುದಕ್ಕೂ ಮುಂಚೆ ಜಾಣ ನಟ, ನಿರ್ದೇಶಕ ರಮೇಶ್ ಅರವಿಂದ್ ಚಿತ್ರದ ಕಿರುಪರಿಚಯವನ್ನು ನೀಡುವುದರ ಜೊತೆಗೆ ಸುಮಾರು 40 ಮಕ್ಕಳ ಜೊತೆಯಲ್ಲಿ ಹೃದಯ ಚಿಕಿತ್ಸೆ ಮಾಡುವ ವೈದ್ಯರ ಪಾತ್ರದಲ್ಲಿ ತಾವು ಅಭಿನಯಿಸಿರುವುದಾಗಿ ಹೇಳಿಕೊಂಡರು.

ಈ ಆಧಾರದ ಮೇಲೆ 800 ಮಕ್ಕಳು ಮಲ್ಲೇಶ್ವರದಲ್ಲಿ ಶನಿವಾರ (ಡಿ.10) ಸೇರಿದ್ದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತ ಮಾಡಿದ್ದಾರೆ. 'ಹೆಲ್ತ್ ಕೇರ್ ಫಾರ್ ಪೀಪಲ್ ಫಸ್ಟ್, ಪ್ರಾಫಿಟ್ ನೆಕ್ಸ್ಟ್' ಎಂಬುದು ಚಿತ್ರದ ಘೋಷ ವಾಕ್ಯ.

ಈಗಾಗಲೇ ನಮ್ಮಣ್ಣ ಡಾನ್ ಅಂತರ್ಜಾಲದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಚಿತ್ರದ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸಿರುವ 'ನಮ್ಮಣ್ಣ ಡಾನ್' ಹಾಸ್ಯ ಪ್ರಧಾನ ಚಿತ್ರದ ನಿರ್ದೇಶನವನ್ನೂ ರಮೇಶ್ ಅವರೇ ಮಾಡಿದ್ದಾರೆ. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್'ಗೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Ramesh Aravind's forthcoming film Nammanna Don. Recently the shooting of the movie held at Malleshwaram play ground, about 800 kids participated in the film. ‘Nammanna Don’ a joint venture by producer Joshi of Luv Kush Productions with Vikram Hospital has completed first schedule of shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X