»   » ಮಾ.13 ರಂದು 'ನಂದಾ ಲವ್ಸ್ ನಂದಿತಾ' ತೆರೆಗೆ

ಮಾ.13 ರಂದು 'ನಂದಾ ಲವ್ಸ್ ನಂದಿತಾ' ತೆರೆಗೆ

Subscribe to Filmibeat Kannada

ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ರಮೇಶ್‌ಕಶ್ಯಪ್ ಅವರು ನಿರ್ಮಿಸಿ ಗೆಜ್ಜೆನಾದ ವಿಜಯಕುಮಾರ್ ನಿರ್ದೇಶಿಸಿರುವ ನಂದಾ ಲವ್ಸ್ ನಂದಿತಾ ಚಿತ್ರ ಮಾರ್ಚ್ 13 ರಂದು ರಾಜ್ಯಾದ್ಯಂತ ತೆರೆ ಕಂಡಿದೆ. 'ಪಾತಕ ಲೋಕದಲ್ಲೊಂದು ಮೊಹಬ್ಬತ್' ಎಂಬುದು ಚಿತ್ರದ ಅಡಿ ಬರಹ.

ಕಳೆದವರ್ಷ ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆ ಸೃಷ್ಟಿಸಿದ 'ದುನಿಯಾ ಚಿತ್ರದಲ್ಲಿ ಲೂಸ್‌ಮಾದ ಎಲ್ಲರ ಗಮನ ಸೆಳೆದ ಪಾತ್ರ. ಚಿಕ್ಕ ವಯಸ್ಸಿನಲ್ಲೇ ಆ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಯೋಗೀಶ್ 'ನಂದಾ ಲವ್ಸ್ ನಂದಿತಾ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ನಂದಿತಾ ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್, ಗಿರಿಜಾಲೋಕೇಶ್, ಸುರೇಶ್ಚಂದ್ರ, ಜೋಗಿ ನಾಗರಾಜ್, ಸಂಗೀತಾಶೆಟ್ಟಿ, ಶೋಭಾ, ರಮೇಶ್, ಡೈಮೆಂಡ್ ರಾಜಣ್ಣ, ಬೇಬಿ ನಿಖಿತ, ಮಾ:ಶ್ರೀನಿವಾಸಪ್ರಸಾದ್ ಮುಂತಾದವರು ಇವರೊಂದಿಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಉತ್ತಮ ಕಥೆಗಳನ್ನು ನೀಡಿರುವ ಅಜಯಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಎ.ಆರ್.ರೆಹಮಾನ್ ಹಾಗೂ ಜೆಸ್ಸಿಗಿಫ್ಟ್ ಅವರಂತ ಖ್ಯಾತನಾಮರ ಬಳಿ ಸಹಾಯಕರಾಗಿದ್ದ ಎಮಿಲ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಅಕ್ಷಯ ಆಡಿಯೋ ಮೂಲಕ ಬಿಡುಗಡೆಯಾಗಿದ್ದು ಕೇಳುಗರ ಮನದಲ್ಲಿ ಮನೆ ಮಾಡಿದೆ. ಉಳಿದಂತೆ ಮ್ಯಾಥ್ಯೂರಾಜನ್ ಛಾಯಾಗ್ರಹಣ, ಮಂಜು ಮಾಂಡವ್ಯ ಸಂಭಾಷಣೆ, ಡಿಫರೆಂಟ್‌ಡ್ಯಾನಿ ಸಾಹಸ, ಪ್ರಸಾದ್, ರಾಜೇಶ್ ಹಾಗೂ ಇಮ್ರಾನ್ ನೃತ್ಯ, ಕೆ.ಎಸ್.ಪ್ರಕಾಶ್ ಸಂಕಲನ, ಜಗದೀಶ್ ಮೈಸೂರ್ ಸಹನಿರ್ದೇಶನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆ ನಂದಾ ಲವ್ಸ್ ನಂದಿತಾ ಚಿತ್ರಕ್ಕಿದೆ.

(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada