twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸಾಫೀಸಲ್ಲಿ ಪರಮಾತ್ಮ ಕಲೆಕ್ಷನ್ಸ್ ರು.9 ಕೋಟಿ

    |

    Paramathma movie still
    ಪವರ್ ಸ್ಟಾರ್ ಪುನೀತ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್‌ನಲ್ಲಿ ವಿಜಯದಶಮಿ ದಿನದಂದು ಬಿಡುಗಡೆಗೊಂಡ 'ಪರಮಾತ್ಮ' ಚಿತ್ರ ಎಲ್ಲಡೆ ವಿಜಯ ದುಂದುಭಿ ಬಾರಿಸುತ್ತಿದೆ. ನಿರೀಕ್ಷೆಗೂ ಮೀರಿ ಚಿತ್ರ ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಮೊದಲ ವಾರ ರು.9ಕೋಟಿ ಸಂಪಾದಿಸಿದೆ.

    ಚಿತ್ರದ ನಿರ್ಮಾಪಕ ಮತ್ತು ಹಂಚಿಕೆದಾರ ಜಯಣ್ಣ ಈ ಅಂಕಿಅಂಶವನ್ನು ಬಿಡುಗಡೆಗೊಳಿಸಿದ್ದು ರಾಜ್ಯದ ಎಲ್ಲಾ ಭಾಗಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಚಿತ್ರ ಪ್ರಚಂಡ ಯಶಸ್ಸಿನತ್ತ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಎಲ್ಲಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗಲು ಪ್ರಮುಖ ಕಾರಣ. ಅಲ್ಲದೆ ಮಾಧ್ಯಮಗಳ ವಿಮರ್ಶೆ ಏನೇ ಇದ್ದರೂ ಪುನೀತ್ ಚಿತ್ರವನ್ನು ಒಂದು ಕಿತ ನೋಡೇ ಬಿಡುವ ಎನ್ನುವ ಫ್ಯಾಮಿಲಿ ಕ್ರೌಡ್ ಇರುವುದರಿಂದ ಪುನೀತ್ ಚಿತ್ರಗಳು ಎಂದೂ ನಿರ್ಮಾಪಕರಿಗೆ ನಷ್ಟ ತಂದಿಲ್ಲ.

    ಸಾಲು ಸಾಲು ದಸರಾ ರಜೆಯ ನಂತರ ಚಿತ್ರದ ಕಲೆಕ್ಷನ್ ಹಿನ್ನಡೆ ಅನುಭವಿಸಬಹುದು ಎಂಬ ಅಂದಾಜು ಹುಸಿಯಾಗಿದೆ. ರಜೆಯ ನಂತರ ಕೂಡಾ ಚಿತ್ರ ನಿರ್ಮಾಪಕರ ಪಾಲಿಗೆ 'ಪರಮಾತ್ಮ' ನಾಗುವತ್ತ ಸಾಗುತ್ತಿದೆ. ದರ್ಶನ್ ಅಭಿನಯದ 'ಸಾರಥಿ' ಚಿತ್ರ ಕೂಡಾ ಗಲ್ಲಾಪೆಟ್ಟಿಗೆ ಲೂಟಿ ಹೊಡೆಯುತ್ತಿದೆ. (ಒನ್‍ಇಂಡಿಯಾ ಕನ್ನಡ)

    English summary
    The box office collection for Kannada movie, Puneet Rajkumars 'Paramathma' is Rs.9 crores in one week. So far, this is the highest revenue claims producer Jayanna and Bogendra. It shows the market for Kannada films have not dipped inspite of negetive movie reviews!
    Thursday, October 13, 2011, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X